Home » Tamilunadu : ಯೂಟ್ಯೂಬ್ ನೋಡಿಕೊಂಡು ಡಯಟ್ ಮಾಡಿ ಯುವಕ ಸಾವು- 3 ತಿಂಗಳಿನಿಂದ ಆತ ಸೇವಿಸಿದ್ದೇನು ಗೊತ್ತಾ?

Tamilunadu : ಯೂಟ್ಯೂಬ್ ನೋಡಿಕೊಂಡು ಡಯಟ್ ಮಾಡಿ ಯುವಕ ಸಾವು- 3 ತಿಂಗಳಿನಿಂದ ಆತ ಸೇವಿಸಿದ್ದೇನು ಗೊತ್ತಾ?

0 comments

Tamilunadu : ಯೂಟ್ಯೂಬ್​ನಲ್ಲಿನ ಡಯಟ್ ವಿಡಿಯೋ ನೋಡಿ ತೂಕ ಇಳಿಸಿಕೊಳ್ಳಲು 3 ತಿಂಗಳ ಕಾಲ ಆಹಾರ ಬಿಟ್ಟು ಹಣ್ಣಿನ ಜ್ಯೂಸ್ ಸೇವಿಸಿದ 17 ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ.

ಹೌದು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕೊಳಚೆಲ್‌ ಎಂಬಲ್ಲಿ 17ರ ಹರೆಯದ ಬಾಲಕ ಯೂಟ್ಯೂಬ್ ವೀಡಿಯೊ ನೋಡಿ ಡಯಟ್ ಮಾಡಿದ ಬಳಿಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಆತನ ಕಟುಂಬಸ್ಥರು ಹೇಳಿದ್ದಾರೆ. ಸಕ್ತೇಶ್ವರನ್ ಮೃತ ವಿದ್ಯಾರ್ಥಿ.

ಸಕ್ತೇಶ್ವರನ್ ಆರೋಗ್ಯವಂತನಾಗಿದ್ದ ಮತ್ತು ಕ್ರಿಯಾಶೀಲನಾಗಿದ್ದ. 12ನೇ ತರಗತಿ ಪಾಸಾಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ತಯಾರಾಗಿದ್ದ. ನಿನ್ನೆ ಬೆಳಿಗ್ಗೆ ಮನೆಯಲ್ಲಿದ್ದ ಶಕ್ತೀಶ್ವರ್ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದ. ಆತಂಕಗೊಂಡ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾಗಿ ತಿಳಿಸಿದರು. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೋಷಕರನ್ನು ವಿಚಾರಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಶಕ್ತೀಶ್ವರ್ ತನ್ನ ದೇಹದ ತೂಕದಿಂದ ಬಳಲುತ್ತಿದ್ದ. ಕಾಲೇಜಿಗೆ ಹೋಗುವ ಮುನ್ನ ತೂಕ ಇಳಿಸಿಕೊಳ್ಳಲು ಯೂಟ್ಯೂಬ್ ವಿಡಿಯೋ ನೋಡಿ ಕಠಿಣ ಡಯೆಟ್ ಮಾಡುತ್ತಿದ್ದ. ಸುಮಾರು 3 ತಿಂಗಳಿನಿಂದ ಜ್ಯೂಸ್ ಮಾತ್ರ ಕುಡಿದು ವ್ಯಾಯಾಮ ಮಾಡುತ್ತಿದ್ದ. ನಿರಂತರವಾಗಿ ಜ್ಯೂಸ್ ಕುಡಿಯುತ್ತಿದ್ದರಿಂದ ಶೀತದ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಉಸಿರಾಡಲು ಕಷ್ಟಪಡುತ್ತಿದ್ದ.

ʼಚಿಕ್ಕ ವಯಸ್ಸಿನಿಂದಲೂ ಸಕ್ತೀಶ್ವರನ್ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದ. ಇದೇ ಕಾರಣಕ್ಕೆ ಶಾಲೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಇತ್ತೀಚೆಗೆ ತಿರುಚಿರಾಪಳ್ಳಿಯ ಕಾಲೇಜಿಗೆ ಪ್ರವೇಶ ಪಡೆದಿದ್ದ ಸಕ್ತೀಶ್ವರನ್ ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದ. ಕಳೆದ ಮೂರು ತಿಂಗಳಿನಿಂದ ಹಣ್ಣುಗಳು ಮತ್ತು ರಸವನ್ನು ಮಾತ್ರ ಸೇವಿಸುತ್ತಿದ್ದʼ ಎಂದು ಸ್ಥಳೀಯರು ಹೇಳಿದ್ದಾರೆ.

You may also like