Home » Sullia: ಸುಳ್ಯ: ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ಹೊಡೆದು ಮಹಿಳೆ ಸಾವು!

Sullia: ಸುಳ್ಯ: ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ಹೊಡೆದು ಮಹಿಳೆ ಸಾವು!

0 comments

Sullia : ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಕಲ್ಲಗುಂಡಿ ಅಂಚೆ ಕಚೇರಿ ಬಳಿ ನಡೆದಿದೆ. ಮೃತರನ್ನು ಕಮಲಾ (67) ಎಂದು ಗುರುತಿಸಲಾಗಿದೆ.

ಕಮಲಾ ಅವರು ಸಂಪಾಜೆಗೆ ಹೋಗುವ ಬಸ್‌ ಹತ್ತುವುದಕ್ಕಾಗಿ ಕಲ್ಲಗುಂಡಿ ಅಂಚೆ ಕಚೇರಿ ಬಳಿ ರಸ್ತೆ ದಾಟುತ್ತಿದ್ದಾಗ, ಸುಳ್ಯದ ಕಡೆಗೆ ಬರುತ್ತಿದ್ದ ಕೇರಳ ನೋಂದಣಿಯ ಬೈಕ್‌ ನಿಯಂತ್ರಣ ಕಳೆದುಕೊಂಡು ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Lakshmi Hebbalkar: ರಾಹುಲ್ ಗಾಂಧಿ ಮಾಡಿದ ತ್ಯಾಗ ದೇಶದ ಎಲ್ಲಾ ಯುವಕರಿಗೆ ಮಾದರಿ ಆಗಬೇಕು – ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

You may also like