2
Kalburgi: ಕಲಬುರಗಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಶಸ್ತ್ರಚಿಕಿತ್ಸೆಗೊಳಗಾದ ತನ್ನ ತಂದೆಯ ಆರೈಕೆಗೆಂದು ಬಂದಿದ್ದ 17 ವರ್ಷದ ಯುವತಿಯ ಮೇಲೆ ಸ್ವಚ್ಛತಾ ವಿಭಾಗದ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುಗ ಆಘಾತಕಾರಿ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ತಾಯಿ ವಿಕಲಚೇತನರಾಗಿರುವ ಕಾರಣ ತನ್ನ ತಂದೆಯ ಆರೈಕೆಗೆಂದು ಯುವತಿ ಬಂದಿದ್ದು, ಅಲ್ಲೇ ಉಳಿದುಕೊಂಡಿದ್ದಳು. ಇದನ್ನು ದುರುಪಯೋಗ ಪಡೆದುಕೊಂಡ ಸಂಪತ್ ಕಿವಡೇಕರ್ ಎಂಬಾತ ಬಾಲಕಿಯನ್ನು ವೈದ್ಯಕೀಯ ಕಾಲೇಜಿನ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋಗಿ ದೌರ್ಜನ್ ಎಸಗಿದ್ದು, ಈತ ಯುವತಿ ಗ್ರಾಮದವನು ಎಂದು ವರದಿಯಾಗಿದೆ.
ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಫೋಕ್ಸೀ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಯನ್ನು ಬಂಧನ ಮಾಡಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: CM Salary : ಕರ್ನಾಟಕ CM ಸಿದ್ದರಾಮಯ್ಯ ಅವರ ತಿಂಗಳ ಸಂಬಳ ಎಷ್ಟು?
