Home » Parliament : ಪೆಹಲ್ಗಾಮ್ ದಾಳಿಕೋರರು ಪಾಕ್ ಮೂಲದವರು ಎನ್ನಲು ಪುರಾವೆ ಕೇಳಿದ ಕಾಂಗ್ರೆಸ್ – ವೋಟರ್ ಐಡಿ, ಚಾಕೊಲೇಟ್ಗಳೇ ಸಾಕ್ಷಿ ಎಂದ ಅಮಿತ್ ಶಾ!!

Parliament : ಪೆಹಲ್ಗಾಮ್ ದಾಳಿಕೋರರು ಪಾಕ್ ಮೂಲದವರು ಎನ್ನಲು ಪುರಾವೆ ಕೇಳಿದ ಕಾಂಗ್ರೆಸ್ – ವೋಟರ್ ಐಡಿ, ಚಾಕೊಲೇಟ್ಗಳೇ ಸಾಕ್ಷಿ ಎಂದ ಅಮಿತ್ ಶಾ!!

0 comments

Parliament : ಸಂಸತ್ ಅಧಿವೇಶನದಲ್ಲಿ ಪೆಹಲ್ಗಾಂ ದಾಳಿಯ ಕುರಿತು ಚರ್ಚೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಪಹಲ್ಗಾಮ್ನಲ್ಲಿ ದಾಳಿ ನಡೆಸಿದ್ದ ಉಗ್ರರು ಪಾಕಿಸ್ತಾನದವರು ಎಂಬುದಕ್ಕೆ ನಿಮ್ಮ ಬಳಿ ಪುರಾವೆ ಏನಿದೆ?, ಅವರು ದೇಶೀಯ ಉಗ್ರರು ಕೂಡ ಆಗಿರಬಹುದಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ ಚಿದಂಬರಂ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಕ್ ವೋಟರ್ ಐಡಿ, ಚಾಕೊಲೇಟ್ಗಳು ಸಿಕ್ಕಿವೆ ಪಹಲ್ಗಾಮ್(Pahalgam) ದಾಳಿಕೋರರು ಪಾಕಿಸ್ತಾನದವರು ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದು ಕೇಳಿದ್ದಾರೆ.

ಭಾರತವು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ನಾಶಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿ, ಹಲವಾರು ಭಯೋತ್ಪಾದಕರನ್ನು ಕೊಂದಿವೆ ಎಂದು ಹೇಳಿದರು.

ಇದನ್ನೂ ಓದಿ: UP: ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದ ಆದ ಎಡವಟ್ಟು – ಮಾಡದ ತಪ್ಪಿಗೆ 17 ಶಿಕ್ಷೆ !!

You may also like