Dharmastala Case: ಧರ್ಮಸ್ಥಳದ ದಟ್ಟರಣ್ಯದಲ್ಲಿ ಹುಡುಕಾಟ ಮಾಡುತ್ತಿರುವ ಉತ್ಖನನ ಕಾರ್ಯದಲ್ಲಿ, ಶವ ಹೂತಿದ್ದೆ ಎಂದು ಪಾಯಿಂಟ್ ನಂಬರ್ ವನ್ನಲ್ಲಿ ಕಳೆಬರಹ ದೊರಕ್ಕಿಲ್ಲ ಎಂದು ವರದಿಯಾಗಿದೆ.

ಅನಾಮಿಕ ವ್ಯಕ್ತಿ ಮೊದಲಿಗೆ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನನ ಕಾರ್ಯ ನಡೆದಿದೆ. ಮೊದಲಿಗೆ ಮೂರು-ನಾಲ್ಕು ಅಡಿ ಅಗೆಯಲಾಯ್ತು. ಆದರೆ ಏನೂ ಸಿಗದ ಕಾರಣ ಮಾಸ್ಕ್ಮ್ಯಾನ್ ಮತ್ತಷ್ಟು ಅಗೆಯಲು ಹೇಳಿದ್ದು, ಆರು ಅಡಿ ಅಗೆದಿದ್ದಾರೆ.

ಯಾವುದೇ ಕಳೇಬರ, ಮೂಳೆ, ಗುರುತುಗಳು ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಪಾಯಿಂಟ್ ನಂಬರ್ 1 ಕ್ಕೆ ಡಿಐಜಿ ಅನುಚೇತ್ ಭೇಟಿ ನೀಡಿದ್ದು, ಮಾಸ್ಕ್ಮ್ಯಾನ್ ಬಳಿ ಸ್ವಲ್ಪ ಹೊತ್ತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಸಾಕ್ಷಿದಾರ ನಾನು ಇಲ್ಲೇ ಹೂತ್ತಿದ್ದೆ ,ಮತ್ತೆ ಅಗೆಯಿರಿ ಎಂದು ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆ ಜೆಸಿಬಿ ಮೂಲಕ ಉತ್ಖನನ ಮಾಡಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಸ್ಥಳಕ್ಕೆ ಹಿಟಾಚಿ ಆಗಮಿಸಿದೆ. ಹಿಟಾಚಿ ಮೂಲಕ ಮೊದಲು ಆಗೇದ ಸ್ಥಳದ ಆಸುಪಾಸಿನಲ್ಲಿ ಅಗೆತ ಕಾರ್ಯ ಮುಂದುವರೆಯಲಿದೆ ಎನ್ನುವ ಮಾಹಿತಿ ಬಂದಿದೆ. ಅರಣ್ಯ ಅಗೆಯಲು ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
