Home » Mantralaya: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ: ಸಂಗ್ರಹವಾದ ಭಾರೀ ಮೊತ್ತದ ಕಾಣಿಕೆ?!

Mantralaya: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ: ಸಂಗ್ರಹವಾದ ಭಾರೀ ಮೊತ್ತದ ಕಾಣಿಕೆ?!

0 comments

Mantralaya: ಕಲಿಯುಗ ಕಾಮಧೇನು ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಮಠದಲ್ಲಿ ಮೊದಲ ಬಾರಿಗೆ 5.46 ಕೋಟಿ ರೂ. ದಾಖಲೆಯ ಕಾಣಿಕೆ ಸಂಗ್ರಹಗೊಂಡಿದೆ.

ಕಳೆದ 35 ದಿನಗಳಲ್ಲಿ ಒಟ್ಟು 5,46,06,555 ರೂ. ಕಾಣಿಕೆ ಸಂಗ್ರಹವಾಗಿತ್ತು. ಒಟ್ಟು ಕಾಣಿಕೆಯಲ್ಲಿ 5,30,92,555 ರೂ. ನೋಟುಗಳು. 15,14,000 ರೂ. ನಾಣ್ಯಗಳಿವೆ. 127 ಗ್ರಾಂ ಚಿನ್ನ, 1820 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

ಜೂನ್ ತಿಂಗಳಲ್ಲಿ ಒಟ್ಟು 5 ಕೋಟಿ 28 ಲಕ್ಷ 39,538 ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಆ ದಾಖಲೆಯನ್ನು ಮುರಿದು ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕರ ಸೇವಕರು, ಮಠದ ಭಕ್ತರು, ಮಠದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿರುವುದಾಗಿ ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: Dharmasthala: ಧರ್ಮಸ್ಥಳ: ಶವ ಉತ್ಪನನಕ್ಕೆ ಮೀಸಲು ಅರಣ್ಯದಲ್ಲಿ ಜೆಸಿಬಿ ಬಳಸದಿರಲು ನಿರ್ಧಾರ ಸಾಧ್ಯತೆ!

You may also like