4
Pratham and Rakshak Bullet: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ನಟ ಪ್ರಥಮ್ ಹಾಗೂ ರಕ್ಷಕ್‌ಗೆ ಸ್ಥಳ ಮಹಜರಿಗೆ ಬರುವಂತೆ ನೋಟಿಸ್ ನೀಡಿದ್ದಾರೆ.
ಗುರುವಾರ (ಇಂದು) 11 ಗಂಟೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಸ್ಥಳ ಮಹಜರಿಗೆ ಹಾಜರಾಗುವಂತೆ ನಟ ಪ್ರಥಮ್, ರಕ್ಷಕ್ ಹಾಗೂ ಜಮೀನು ಮಾಲೀಕ ಮಹೇಶ್‌ಗೆ ನೋಟಿಸ್ ನೀಡಲಾಗಿದೆ. ಸಾಕ್ಷಿಗಳ ಸಮ್ಮುಖದಲ್ಲಿ ಸ್ಪಾಟ್ ಮಹಜರು ಮಾಡುವ ಅವಶ್ಯಕತೆ ಇದೆ ಎಂದು ವರದಿಯಾಗಿದೆ.
ಸ್ಥಳ ಮಹಜರ ಮಾಡಿದ ನಂತರ ಪೊಲೀಸರು ಆರೋಪಿತ ವ್ಯಕ್ತಿಗಳಾದ ರೌಡಿಶೀಟರ್ ಬೇಕರಿ ರಘು ಹಾಗೂ ಯಶಸ್ವಿನಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಸಾಕ್ಷಿಗಳ ಸಮ್ಮುಖದಲ್ಲಿ ಮಹಜರು ಮಾಡುವ ಅವಶ್ಯಕತೆ ಇದೆ ಎಂದು ವರದಿಯಾಗಿದೆ.
