Home » BMTC Bus: ಕಿಲ್ಲರ್ ಬಿಎಂಟಿಸಿ ಇವಿ ಬಸ್ ಗೆ ಮತ್ತೊಂದು ಮಹಿಳೆ ಬಲಿ – ಮಗುವಿನ ಸ್ಥಿತಿ ಗಂಭೀರ

BMTC Bus: ಕಿಲ್ಲರ್ ಬಿಎಂಟಿಸಿ ಇವಿ ಬಸ್ ಗೆ ಮತ್ತೊಂದು ಮಹಿಳೆ ಬಲಿ – ಮಗುವಿನ ಸ್ಥಿತಿ ಗಂಭೀರ

0 comments

BMTC Bus: ಬಿಎಂಟಿಸಿ ಬಸ್ ಅಪಘಾತಕ್ಕೆ ಬೆಂಗಳೂರಿನ ಜನ ಜೀವ ಕಳೆದುಕೊಳಳುತ್ತಿರುವ ಘಟನೆಗಳು ಸಂಭವಿಸುತ್ತಿವೆ. ನಿನ್ನೆ ಒಂದೇ ದಿನ ಎರಡು ಕಡೆ ಆಕ್ಸಿಡೆಂಟ್ ಮಾಡಿದ ಇವಿ ಬಸ್ ಚಾಲಕರು ಘಟನೆ ಒಂದರಲ್ಲಿ ಮಹಿಳೆ ಬಲಿಯಾದರೆ ಇನ್ನೊಂದು ಘಟನೆಯಲ್ಲಿ ಮಗುವೊಂದರ ಸ್ಥಿತಿ ಗಂಭೀರವಾಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ಅಮಾಯಕರನ್ನು ಬಿಎಂಟಿಸಿ ಇವಿ ಬಸ್ ಬಲಿ ಪಡೆದಿದೆ. ಚಾಲಕ ಬಸ್ ರಿವರ್ಸ್ ತೆಗೆಯುವಾಗ ಬಸ್ ಸ್ಟಾಂಡ್ ನಲ್ಲಿದ್ದ ಪ್ರಯಾಣಿಕರ ಮೇಲೆ ಬಸ್ ಹತ್ತಿಸಿದ್ದಾನೆ. ಹಿಂಬದಿಯ ಚಕ್ರ ಹತ್ತಿ ಸ್ಥಳದಲ್ಲೇ 63 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇದು ಡಿಪೋ 16 ಕ್ಕೆ ಸೇರಿದ ಬಸ್ ನಂ KA51AK7332 ಇವಿ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಚಾಲಕ ಚೇತನ್ ಬೇಜಬ್ದಾರಿಯಿಂದ ಈ ದುರ್ಘಟನೆ ಸಂಭವಿಸಿದ್ದು, ಈ ತಿಂಗಳಲ್ಲೇ ಬಿಎಂಟಿಸಿಯಿಂದ ಆಗ್ತಿರೋ 4 ನೇ ಆಕ್ಸಿಡೆಂಟ್ ಇದಾಗಿದೆ.

ಇನ್ನು ಘಟನೆ 2ರಲ್ಲಿ ಬಿಎಂಟಿಸಿ ನಿರ್ಲಕ್ಷ್ಯದಿಂದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಚಾಮರಾಜಪೇಟೆ ಉಮಾ ಥಿಯೇಟರ್ ಬಳಿ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಮಗುವಿನೊಂದಿಗೆ ಮಹಿಳೆ ಬರುತ್ತಿದ್ದಾಗ ಎಡದಿಂದ ಓವರ್ ಟೇಕ್ ಮಾಡಲು ಹೋಗಿ ಬಸ್ ನ ಹಿಂಭಾಗದ ಎಡ ಚಕ್ರಕ್ಕೆ ಮಗು ಜಾರಿ ಬಿದ್ದಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಡಿಪೋ ನಂ 13 ಕ್ಕೆ ಸೇರಿದ KA 51 AK2800 ಇವಿ ಬಸ್ ನಲ್ಲಿ ನಡೆದಿದ್ದು, ಮೆಜೆಸ್ಟಿಕ್ ನಿಂದ ಕಾಮಾಕ್ಯಕ್ಕೆ ಕಡೆ ಬಸ್ ಚಲಿಸುತ್ತಿತ್ತು. ನಿನ್ನೆ ಸಂಜೆ 6.50 ರ ಸುಮಾರಿಗೆ ಘಟನೆ ನಡೆದಿದ್ದು, ಬಿಎಂಟಿಸಿ ಜನರ ಪಾಲಿಗೆ ಕಿಲ್ಲರ್ ಬಿಎಂಟಿಸಿಯಾಗಿ ಸೇವೆ ನೀಡುತ್ತಿದೆ. ಚಾಲಕರ ನಿರ್ಲಕ್ಷ್ಯ, ವೇಗ, ಅರ್ಜಂಟ್ ಮಾಡೋದು, ಸರಿಯಾದ ಸೇವಾ ಕರ್ತವ್ಯವನ್ನು ಪಾಲಿಸದಿರುವುದೇ ಇದಕ್ಕೆ ಮೂಲ ಕಾರಣ ಎನ್ನಬಹುದು.

ಇದನ್ನೂ ಓದಿ: Pratham and Rakshak Bullet: ಜೀವ ಬೆದರಿಕೆ ಪ್ರಕರಣ: ಪ್ರಥಮ್‌, ರಕ್ಷಕ್‌ಗೆ ಸ್ಥಳ ಮಹಜರಿಗೆ ಬರಲು ನೋಟಿಸ್

You may also like