Home » Dharmasthala burial Case: ಧರ್ಮಸ್ಥಳ ಪ್ರಕರಣ : ಆರನೇ ಪಾಯಿಂಟ್ ಬಿಟ್ಟು ಕದಲದ ತಂಡ : ಡಾಗ್ ಸ್ಕ್ವಾಡ್ ಸ್ಥಳಕ್ಕೆ

Dharmasthala burial Case: ಧರ್ಮಸ್ಥಳ ಪ್ರಕರಣ : ಆರನೇ ಪಾಯಿಂಟ್ ಬಿಟ್ಟು ಕದಲದ ತಂಡ : ಡಾಗ್ ಸ್ಕ್ವಾಡ್ ಸ್ಥಳಕ್ಕೆ

0 comments

Dharmasthala burial Case: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಪಾಯಿಂಟ್‌ನಲ್ಲಿ ಇನ್ನಷ್ಟು ಉತ್ಖನನ ಕಾರ್ಯ ಜೋರಾಗಿ ನಡೆಯುತ್ತಿದೆ. ಅಸ್ಥಿ ಪಂಜರ ಸಿಕ್ಕ ಜಾಗಕ್ಕೆ ಇದೀಗ ಡಾಗ್ ಸ್ಕ್ವಾಡ್ ಆಗಮಿಸಿದ್ದು, ಕಾರ್ಯಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುತ್ತಿದೆ.

ಸ್ಥಳಕ್ಕೆ ಬಂದ ಶ್ವಾನ ಇದೀಗ ಸಿಕ್ಕ ಮೂಳೆಗಳನ್ನು ಪರೀಶೀಲಿಸಿ ಈ ಮೂಳೆಗೆ ಸಂಬಂಧಿಸಿದ ಇನ್ನಷ್ಟು ಮೂಳೆಗಳು ಇನ್ನು ಇವೆಯಾ ಎಂಬುದನ್ನು ಹುಡುಕಲು ಸಹಾಯ ಮಾಡಲಿದೆ ಎಂಬ ಮಾಹಿತಿಯಿದೆ. ಮೂಲೆ ಸಿಕ್ಕ ನಂತರ ಎಸ್ಐಟಿ ತಂಡ ಆರನೇ ಪಾಯಿಂಟ್ ಜಾಗದಿಂದ ಕದಲದೇ ಅಲ್ಲೆ ಕಾರ್ಯಚರಿಸುತ್ತಿದ್ದಾರೆ. ಅಲ್ಲದೆ ಊಟಕ್ಕೆ ಯಾವುದೇ ವಿರಾಮ ನೀಡದೆ ಮಹಜರು ಸ್ಥಳಕ್ಕೆ ಊಟವನ್ನು ಕಾರ್ಮಿಕರಿಗೆ ತಂದು ನೀಡಲಾಗುತ್ತಿದೆ.

ಸಾರ್ವಜನಿಕರ ಕಣ್ಣಿನಿಂದ ತಪ್ಪಿಸಲು ಮಹಜರು ಸ್ಥಳಕ್ಕೆ ಅಡ್ಡಲಾಗಿ ಪರದೆ ಕಟ್ಟಿ ಆರನೇ ಪಾಯಿಂಟ್ ಗುಂಡಿಯನ್ನು ಇನ್ನಷ್ಟು ಅಗೆಯುವ ಕಾರ್ಯವನ್ನು ಮಾಡಲಾಗುತ್ತಿದೆ. ಸಿಕ್ಕ ಮೂಳಗಳನ್ನು ಹಾಗು ಮಣ್ಣನ್ನು FSLತಂಡ ಸಂಗ್ರಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

You may also like