Home » Urea Shortage: ಮುಂದುವರಿದ‌ ಯೂರಿಯಾ ಕೊರತೆ – ರಾತ್ರಿಯಿಂದ ಚಳಿಯಲ್ಲಿ ನಿಂತಿರುವ ಸಾವಿರಾರು ರೈತರು

Urea Shortage: ಮುಂದುವರಿದ‌ ಯೂರಿಯಾ ಕೊರತೆ – ರಾತ್ರಿಯಿಂದ ಚಳಿಯಲ್ಲಿ ನಿಂತಿರುವ ಸಾವಿರಾರು ರೈತರು

0 comments

Urea Shortage: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರದ ತೀವ್ರ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ರೈತರ ಸಮಸ್ಯೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಇದೀಗ ಗದಗ ಜಿಲ್ಲೆಯಲ್ಲಿ ಯೂರಿಯಾ ಕೊರತೆ ಸಮಸ್ಯೆ ಮುಂದುವರಿದೆ. ಆದರೆ ಸರ್ಕಾರ ರಾಜ್ಯದಲ್ಲಿ ಯಾವುದೇ ಗೊಬ್ಬರ ಕೊರತೆ ಇಲ್ಲ. ರೈತರು ಗೊಂದಲಕ್ಕೆ ಈಡಾಗುವ ಅಗತ್ಯ ಇಲ್ಲ ಎಂದು ಹೇಳುತ್ತಿದೆ. ಆದರೆ ಗದಗ ಜಿಲ್ಲೆಯ ಇಂದಿನ ಪರಿಸ್ಥಿತಿ ಇದಕ್ಕೆ ತದ್ವಿವಿರುದ್ದವಾಗಿದೆ. ಯೂರಿಯಾ ಗೊಬ್ಬರ ಖರೀದಿಗಾಗಿ ಸಾವಿರಾರು ರೈತರು ರಾತ್ರಿಯಿಂದ ಚಳಿಯಲ್ಲಿಯೇ ಸರದಿಯಲ್ಲಿ ನಿಂತಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಾಲೂಕು ಆಸ್ಪತ್ರೆ ಪಕ್ಕದಲ್ಲಿರುವ ಜನತಾ ಬಜಾರನಲ್ಲಿ ಗೊಬ್ಬರ ಹಂಚಿಕೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದ್ದು, ಪೊಲೀಸ್ ಕಾವಲಿನಲ್ಲಿ ಗೊಬ್ಬರ ಖರೀದಿ ನಡೆಯುತ್ತಿದೆ. ಅಲ್ಲದೆ ಅಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಪೊಲೀಸರು ಈಗ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.

ಇಲ್ಲಿ ರೈತರು ಮಾತ್ರ ತೊಂದರೆ ಅನಿಭವಿಸದೆ ತಾಲೂಕು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಆಗಮಿಸಿದ ರೋಗಿಗಳೂ ಈ ಅವ್ಯವಸ್ಥೆಯಿಂದ ಪರದಾಡುವಂತಾಗಿದೆ. ರೈತರ ಗದ್ದಲ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: Bombay High court : ಗಂಡನನ್ನು ಹೆಂಡತಿ ‘ನಪುಂಸಕ’ ಎಂದು ಕರೆಯಬಹುದು – ಹೈಕೋರ್ಟ್ ತೀರ್ಪು

You may also like