Home » Mandya: ಮಾಲೀಕನನ್ನು ಅರಸಿ ಡೆಲ್ಲಿಯಿಂದ ಮಂಡ್ಯಕ್ಕೆ 1790 ಕಿ.ಮೀ ಹಾರಿ ಬಂದ ‘ಪ್ರೀತಿಯ ಪಾರಿವಾಳ’!!

Mandya: ಮಾಲೀಕನನ್ನು ಅರಸಿ ಡೆಲ್ಲಿಯಿಂದ ಮಂಡ್ಯಕ್ಕೆ 1790 ಕಿ.ಮೀ ಹಾರಿ ಬಂದ ‘ಪ್ರೀತಿಯ ಪಾರಿವಾಳ’!!

0 comments

Mandya: ಪಾರಿವಾಳಗಳನ್ನು ಇಂದು ಪ್ರೀತಿಯಿಂದ ಸಾಕುವವರೊಂದಿಗೆ ರೇಸ್ ಹಾಗೂ ಜೂಜಿಗಾಗಿ ಸಾಕುವವರು ಕೂಡ ಇದ್ದಾರೆ. ಹಲವೆಡೆ ಈ ಪಾರಿವಾಳ ರೇಸ್ ದೊಡ್ಡ ಕ್ರೇಜ್ ಆಗಿದೆ. ರೇಸ್ಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಿ ಪಾರಿವಾಳವನ್ನು ಖರೀದಿಸುವವರಿದ್ದಾರೆ. ಅಂತೆಯೇ ಇದೀಗ ರೇಸ್ ಒಂದರಲ್ಲಿ ಪಾರಿವಾಳವೊಂದು ಡೆಲ್ಲಿಯಿಂದ ಮಂಡ್ಯಕ್ಕೆ ತನ್ನ ಮಾಲೀಕನನ್ನು ಅರಸಿ ಬಂದಂತಹ ಅಪರೂಪದ ಘಟನೆ ನಡೆದಿದೆ.

ಹೌದು, ರೇಸ್‌ನಲ್ಲಿ ಪಾಲ್ಗೊಂಡಿದ್ದ ಒಂದು ವರ್ಷದ ಅಭಿಮನ್ಯು ಎಂಬ ಪಾರಿವಾಳ ಡೆಲ್ಲಿಯಿಂದ ಮಂಡ್ಯಕ್ಕೆ 52 ದಿನ‌, 1790 ಕಿ.ಮೀ ಕ್ರಮಿಸಿ ತನ್ನ ಮಾಲೀಕನನ್ನ ಹುಡುಕಿಕೊಂಡು ಬಂದು ದಾಖಲೆ ಬರೆದಿದೆ.

ಅಂದಹಾಗೆ ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ನಿಂದ ಡೆಲ್ಲಿ ರೇಸ್ ಆಯೋಜಿಸಲಾಗಿತ್ತು. ಈ ರೇಸ್ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೇರಿ ಒಟ್ಟು 22 ಪಾರಿವಾಳಗಳು ಭಾಗವಹಿಸಿದ್ದವು. ಎಲ್ಲ ಪಾರಿವಾಳಕ್ಕೂ ರೇಸ್ಗೂ ಮುನ್ನವೇ ರಿಂಗ್ ಅಳವಡಿಕೆ ಮಾಡಲಾಗಿತ್ತು.22 ಪಾರಿವಾಳಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗಳಿಗೆ ವಾಪಸ್ಸಾಗಿವೆ.

ಅಂದಹಾಗೆ ಏಪ್ರಿಲ್ 5 ರಂದು ದೆಹಲಿಯಿಂದ ಪಾರಿವಾಳಗಳನ್ನ ಹಾರಿಬಿಡಲಾಗಿತ್ತು. ಆ ಡೆಲ್ಲಿ ರೇಸ್ನಲ್ಲಿ ಭಾಗವಹಿಸಿದ್ದ ಮಂಡ್ಯದ ವಿ.ಸಿ.ಫಾರಂನ ಶ್ರೀಧರ್ ಎಂಬುವವರಿಗೆ ಸೇರಿದ ಒಂದು ವರ್ಷದ ಅಭಿಮನ್ಯು ಹೆಸರಿನ ಪಾರಿವಾಳ, ದೆಹಲಿಯಿಂದ ಮೇ 28ಕ್ಕೆ ಮಂಡ್ಯಕ್ಕೆ ವಾಪಸ್ಸಾಗಿದೆ. ಆ ಮೂಲಕ ಬರೋಬ್ಬರಿ 1790 ಕಿ.ಮೀ ದಾಟಿ ತನ್ನ ಮಾಲೀಕನ ಹುಡುಕಿಕೊಂಡು ಬಂದಿದೆ.

ಇದನ್ನೂ ಓದಿ: Urea Shortage: ಮುಂದುವರಿದ‌ ಯೂರಿಯಾ ಕೊರತೆ – ರಾತ್ರಿಯಿಂದ ಚಳಿಯಲ್ಲಿ ನಿಂತಿರುವ ಸಾವಿರಾರು ರೈತರು

You may also like