Home » KSRTC Protest: ಸಾರಿಗೆ ನೌಕರರ ಮುಷ್ಕರ ಹಿನ್ನಲೆ – ಸಾರಿಗೆ ನೌಕರರಿಗೆ ಟಕ್ಕರ್ ನೀಡಲು ರಾಜ್ಯ ಸರ್ಕಾರ ನಿರ್ಧಾರ – ಇಂದು ಮಹತ್ವದ ಸಭೆ

KSRTC Protest: ಸಾರಿಗೆ ನೌಕರರ ಮುಷ್ಕರ ಹಿನ್ನಲೆ – ಸಾರಿಗೆ ನೌಕರರಿಗೆ ಟಕ್ಕರ್ ನೀಡಲು ರಾಜ್ಯ ಸರ್ಕಾರ ನಿರ್ಧಾರ – ಇಂದು ಮಹತ್ವದ ಸಭೆ

0 comments

KSRTC Protest: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆ, ಆಗಸ್ಟ್ 5 ರಂದು ಬಸ್ ಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನೌಕರರು ನಿರ್ಧರಿಸಿದ್ದಾರೆ. ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ಅತ್ತ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಟಕ್ಕರ್ ಕೊಡಲು ಮುಂದಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಖಾಸಗಿ ಬಸ್ ಮಾಲೀಕರ ಜತೆ ಸಾರಿಗೆ ಇಲಾಖೆ ಆಯುಕ್ತ ಸಭೆ ಕರೆದಿದ್ದು, ಮುಷ್ಕರ ನಡೆದ್ರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಗೊಳ್ಳಲಿದೆ. ಪರ್ಯಾಯ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ.

ಒಂದು ವೇಳೆ ಸಾರಿಗೆ ನೌಕರರು ಮುಷ್ಕರ ನಡೆಸಿದ್ರೆ ಖಾಸಗಿ ಬಸ್ ಓಡಿಸಲು ಸಾರಿಗೆ ಇಲಾಖೆ ಚಿಂತನೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಹಾಗೇ ಸರ್ಕಾರಿ ಬಸ್ ಗಳಿಗೆ ಖಾಸಗಿ ಬಸ್ ಚಾಲಕರನ್ನ ಬಳಸಿಕೊಳ್ಳಲು ಸರ್ಕಾರ ತೀರ್ಮಾನ ಮಾಡಿಲಿದೆ. ಈ ಸಂಬಂಧ ಇಂದಿನ ಸಭೆ ಮಹತ್ವ ಪಡೆದುಕೊಳ್ಳಲಿದೆ.

ಇದನ್ನೂ ಓದಿ: Dharmasthala Case: ಧರ್ಮಸ್ಥಳ ಶವ ಪ್ರಕರಣ: ಗ್ರಾ.ಪಂ.ನಿಂದ ಯುಡಿಆರ್‌ ದಾಖಲೆ ಸಂಗ್ರಹಿಸಿದ ಎಸ್‌ಐಟಿ

You may also like