Rakshak Bullet: ನಟ ರಕ್ಷಕ್ ಬುಲೆಟ್ (Rakshak Bullet,) ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ಬೇಕಾಬಿಟ್ಟಿ ಥಾರ್ ಕಾರು ಚಲಾಯಿಸಿ ಬೈಕ್‌ಗೆ (car accident ) ಢಿಕ್ಕಿ ಹೊಡೆದಿದ್ದಾರೆ. ರಕ್ಷಕ್ ಬುಲೆಟ್ ಎಡವಟ್ಟಿನಿಂದ ಯುವಕನ ಕಾಲು ಮುರಿತವಾಗಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ”ಶಿಡ್ಲಘಟ್ಟ” ಮೂಲದ ”ವೇಣುಗೋಪಾಲ” ಅವರ ಬೈಕ್ ಗೆ ರಕ್ಷಕ್ ಅವರ ಥಾರ್ ಡಿಕ್ಕಿ ಹೊಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸದ್ಯ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದಹಾಗೆ ವೇಣುಗೋಪಾಲ ಎಂಬ ಯುವಕನ ಬೈಕ್ ಗೆ ರಕ್ಷಕ್ ಅವರ ಕೆಂಪು ಬಣ್ಣದ ಥಾರ್ ಕಾರು ಢಿಕ್ಕಿಯಾಗಿದೆ. ಈ ವೇಳೆ ಬೈಕ್‌ನಲ್ಲಿ ವೇಣುಗೋಪಾಲ್ ಹಾಗೂ ಆತನ ಸ್ನೇಹಿತೆ ಇದ್ದರು ಎನ್ನುವುದು ಗೊತ್ತಾಗಿದೆ. ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಆಕ್ಸಿಡೆಂಟ್ ನಡೆದಿದೆ. ಆಕ್ಸಿಡೆಂಟ್ ಆದ ನಂತರ ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ವೇಣುಗೋಪಾಲ್ ಅವರನ್ನು ದಾಖಲಿಸಲಾಗಿದೆ. ಆಕ್ಸಿಡೆಂಟ್ ಅದ ಪರಿಣಾಮ ವೇಣುಗೋಪಾಲ್ ಎಡಗಾಲಿನ ಮೂಳೆ ಮುರಿತವಾಗಿದೆ ಎಂದು ಕೂಡ “ಸುವರ್ಣ ನ್ಯೂಸ್” ಸೇರಿ ಹಲವು ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.
