Home » Prajwal Revanna Case:ಶಿಕ್ಷೆ ಪ್ರಮಾಣ ಪ್ರಕಟ ಮುನ್ನ ಪ್ರಜ್ವಲ್‌ ರೇವಣ್ಣಗೆ ಶಾಕ್ –2 ಅತ್ಯಾಚಾರ ಕೇಸ್‌ನಿಂದ ಹಿಂದೆ ಸರಿದ ಪ್ರಜ್ವಲ್ ವಕೀಲ

Prajwal Revanna Case:ಶಿಕ್ಷೆ ಪ್ರಮಾಣ ಪ್ರಕಟ ಮುನ್ನ ಪ್ರಜ್ವಲ್‌ ರೇವಣ್ಣಗೆ ಶಾಕ್ –2 ಅತ್ಯಾಚಾರ ಕೇಸ್‌ನಿಂದ ಹಿಂದೆ ಸರಿದ ಪ್ರಜ್ವಲ್ ವಕೀಲ

0 comments
Prajwal Revanna

Prajwal Revanna Case: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆಯನ್ನು ಇಂದು ಮಧ್ಯಾಹ್ನ 2.45ಕ್ಕೆ ಪ್ರಕಟಿಸಲಿದೆ. ಇದೇ ವೇಳೆ ಶಿಕ್ಷೆ ಪ್ರಮಾಣ ಪ್ರಕಟ ಮುನ್ನ ಪ್ರಜ್ವಲ್‌ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ. ಅವರ ಇನ್ನುಳಿದ 2 ಅತ್ಯಾಚಾರ ಪ್ರಕರಣಗಳ ಪ್ರಜ್ವಲ್ ಪರ ವಕೀಲ ಅರುಣ್‌ ಕೇಸ್‌ನಿಂದ ಹಿಂದೆ ಸರಿದಿದ್ದಾರೆ.

ಈಬಗ್ಗೆ ವಿವರವನ್ನು ವಕೀಲರು ಇನ್ನು ನೀಡಿಲ್ಲ. ಯಾಕೆ ಹಿಂದೆ ಸರಿದಿದ್ದಾರೆ? ಕಾರಣ ಏನು? ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕು. ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪುನೀಡಿದೆ. 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿದೆ.

ಇದನ್ನೂ ಓದಿ: Uppinangady: ಉಪ್ಪಿನಂಗಡಿ: ದ್ವಿ ಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ಸವಾರ ಮೃ*ತ್ಯು

You may also like