Home » UP: ಮರಣ ಬಾವಿಯಲ್ಲಿ ಸ್ಟಂಟ್ ಮಾಡುತ್ತ ಕೆಳಗೆ ಬಿದ್ದ ಬೈಕರ್ – ಚಾಲಕನಿಲ್ಲದೆಯೇ ಗಂಟೆಗಳ ಕಾಲ ಓಡಿದ ಬೈಕ್ !!

UP: ಮರಣ ಬಾವಿಯಲ್ಲಿ ಸ್ಟಂಟ್ ಮಾಡುತ್ತ ಕೆಳಗೆ ಬಿದ್ದ ಬೈಕರ್ – ಚಾಲಕನಿಲ್ಲದೆಯೇ ಗಂಟೆಗಳ ಕಾಲ ಓಡಿದ ಬೈಕ್ !!

0 comments

UP: ಮರಣ ಬಾವಿಯಂತಹ ಅನೇಕ ಸ್ಟ್ಯಾಂಡ್ ಗಳನ್ನು ಊರ ಜಾತ್ರೆಗಳು, ಕೃಷಿ ಮೇಳ ಸೇರಿದಂತೆ ವಿವಿಧ ರೀತಿಯ ದೊಡ್ಡ ದೊಡ್ಡ ಮೇಳ ಜಾತ್ರೆಗಳಲ್ಲಿ ನೋಡಿರಬಹುದು. ಹೀಗೆ ಸ್ಟಂಟ್ ಮಾಡುತ್ತಿದ್ದ ವೇಳೆ, ಸ್ಟಂಟ್ ಮಾಸ್ಟರ್ ಒಬ್ಬ ಬೈಕ್‌ ಮೇಲೆ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಆದರೆ ಸವಾರನಿಲ್ಲದೆಯೇ ಗಂಟೆಗಳ ಕಾಲ ಆ ಬೈಕ್ ಓಡಿದ ಬೈಕ್ ಮರಣ ಬಾವಿಯಲ್ಲಿ ಸುತ್ತು ಹೊಡೆದಿದ್ದು, ಅದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

ಹೌದು, ಉತ್ತರ ಪ್ರದೇಶದ ಮಹಾರಾಜಗಂಜ್‌ನ ಪಂಚಮುಖಿ ಶಿವ ದೇವಾಲಯದ ಆವರಣದಲ್ಲಿ ಸೋಮವಾರ ಸಂಜೆ ಸಾವನ್ ಜಾತ್ರೆಯ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ. ಬೈಕ್‌ನಿಂದ ಬಿದ್ದ ಸ್ಟಂಟ್ ಮ್ಯಾನ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಆಶ್ಚರ್ಯವೆಂದರೆ ಸವಾರ ಬೈಕ್‌ನಿಂದ ಬಿದ್ದ ನಂತರವೂ ಮೋಟಾರ್ ಸೈಕಲ್ ಸುಮಾರು ಒಂದು ಗಂಟೆಗಳ ಕಾಲ ಚಾಲಕನಿಲ್ಲದೆ ಬಾವಿಯ ಲಂಬವಾದ ಗೋಡೆಗಳ ಮೇಲೆ ಅತಿ ವೇಗದಲ್ಲಿ ಸುತ್ತುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದು, ಬಾವಿಯ ಗೋಡೆಗಳ ಉದ್ದಕ್ಕೂ ಬೈಕ್ ಓಡುತ್ತಿರುವುದು ಕಾಣುತ್ತಿದ್ದು, ಇದರ ಜೊತೆಗೆ ಮರಣ ಬಾವಿಯ ಹೊಂಡದಲ್ಲಿ ಎರಡು ಕಾರುಗಳು, ಒಂದು ಬೈಕ್ ಮತ್ತು ಕೆಲವು ಜನರು ಇರುವುದನ್ನು ವೀಡಿಯೋದಲ್ಲಿ ನೋಡಬಹುದು.

https://x.com/RISHABH79RAAZ/status/1950456132780380647?t=FXyltMEAX1McCVlQhJlTGw&s=19

You may also like