Home » BJP: ರಾಜ್ಯಸಭೆಯಲ್ಲಿ 100 ಗಡಿ ದಾಟಿದ ಬಿಜೆಪಿ ಸದಸ್ಯರ ಸಂಖ್ಯೆ- ಹಾಗಿದ್ರೆ NDA ಬಲ ಎಷ್ಟು?

BJP: ರಾಜ್ಯಸಭೆಯಲ್ಲಿ 100 ಗಡಿ ದಾಟಿದ ಬಿಜೆಪಿ ಸದಸ್ಯರ ಸಂಖ್ಯೆ- ಹಾಗಿದ್ರೆ NDA ಬಲ ಎಷ್ಟು?

0 comments

BJP: 2022ರ ನಂತರ ಇದೀಗ ಮತ್ತೊಮ್ಮೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ನೂರರ ಗಡಿ ದಾಟಿದೆ. ಇತ್ತೀಚೆಗೆ ನಾಮನಿರ್ದೇಶನಗೊಂಡಿದ್ದ ಮೂವರು ಸದಸ್ಯರು ಈ ವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಯಸ್, ಇತ್ತೀಚೆಗೆ ಪ್ರಖ್ಯಾತ ವಕೀಲ ಉಜ್ವಲ್ ನಿಕಮ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತ ಸಿ ಸದಾನಂದನ್ ಮಾಸ್ಟರ್ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ಇವರು ಮೂವರೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಇದರೊಂದಿಗೆ ಮೇಲ್ಮನೆಯಲ್ಲಿ ಪಕ್ಷದ ಸಂಖ್ಯಾಬಲ 102ಕ್ಕೆ ಏರಿಕೆಯಾಗಿದೆ.

ಇವರು ಮೂವರು ಬಿಜೆಪಿಗೆ ಸೇರುವುದರೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಬಲ 240 ಸದಸ್ಯ ಬಲದ ರಾಜ್ಯಸಭೆಯಲ್ಲಿ 134ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ಆಡಳಿತಾರೂಢ ಪಕ್ಷಕ್ಕೆ ಇದು ಮಹತ್ವದ ಬಲ ನೀಡಿದೆ. ಸದ್ಯ ಬಹುಮತಕ್ಕೆ 123 ಸದಸ್ಯರ ಬೆಂಬಲ ಅಗತ್ಯವಿದ್ದು, ಎನ್‌ಡಿಎ ಮೈತ್ರಿಕೂಟ ಇದಕ್ಕೂ ಹೆಚ್ಚಿನ ಸದಸ್ಯಬಲ ಹೊಂದಿದೆ.

You may also like