Dehli: ಕಳ್ಳನೊಬ್ಬ ಕಾಂಗ್ರೆಸ್ ಸಂಸದೆಯ ಸರ(Chain) ದೋಚಿ ಪರಾರಿಯಾಗಿರುವ ಘಟನೆ ದೆಹಲಿಯ ಚಾಣಕ್ಯಪುರಿಯಲ್ಲಿ ನಡೆದಿದೆ.
ಹೌದು,ತಮಿಳುನಾಡಿನ ಮೈಲಾಡುತುರೈ ಲೋಕಸಭಾ ಕ್ಷೇತ್ರದ ಸಂಸದೆ ಸುಧಾ ಅವರು ದೆಹಲಿಯ ತಮಿಳುನಾಡು ಹೌಸ್‌ನಿಂದ ಜಾಗಿಂಗ್ಗೆ ಹೋಗಿದ್ದ ಸುಧಾ ಬಳಿ, ಬೈಕ್ನಲ್ಲಿ ಬಂದ ಅಪರಿಚಿತ ಯುವಕನೊಬ್ಬ 32 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಭಾನುವಾರ ಬೆಳಿಗ್ಗೆ 6.15-6.20ರ ಸುಮಾರಿಗೆ, ನಾವು ಪೋಲೆಂಡ್ ರಾಯಭಾರ ಕಚೇರಿಯ ಗೇಟ್ -3 ಮತ್ತು 4ರ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಎದುರಿನಿಂದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ ತನ್ನ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರವನ್ನು ಕಿತ್ತುಕೊಳ್ಳುವಾಗ ನನ್ನ ಕುತ್ತಿಗೆಗೆ ಗಾಯಗಳಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅವರ ಪ್ರಕಾರ, ಸಂಪೂರ್ಣ ಕ್ಲೋಸ್ ಆಗುವ ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಎದುರಿನಿಂದ ಬಂದು ಇದ್ದಕ್ಕಿದ್ದಂತೆ ಅವರ ಚಿನ್ನದ ಸರವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸುಧಾ ಅವರು ಹೇಳಿದ್ದಾರೆ. ಅಲ್ಲದೆ ಗಾಯಗೊಂಡಿರುವ ಸಂಸದೆ ಸುಧಾರಾಮಕೃಷ್ಣನ್ಇನ್ನು ಚಿನ್ನದ ಸರ ಕಳ್ಳತನವಾಗಿರುವ ಘಟನೆಯಲ್ಲಿ ಸುಧಾ ಅವರಿಗೆ ಗಾಯಗಳಾಗಿದೆ. ಅವರ ಕುತ್ತಿಗೆಗೆ ಗಾಯಗಳಾಗಿದ್ದು, ಕಳ್ಳನನ್ನ ತಡೆಯುವಾಗ ಅವರ ಬಟ್ಟೆಗಳು ಹರಿದು ಹೋಗಿವೆ ಎನ್ನುವ ಮಾಹಿತಿ ಲಭಿಸಿದೆ. ಹೆಲ್ಮೆಟ್ ಹಾಕಿರುವುದರಿಂದ ಕಳ್ಳಮ ಗುರುತಿಸುವುದು ಕಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ, ಅವರು ದೆಹಲಿ ಪೊಲೀಸರ ಮೊಬೈಲ್ ಗಸ್ತು ವ್ಯಾನ್ ಅನ್ನು ಗಮನಿಸಿ ತಕ್ಷಣ ವಿಷಯವನ್ನು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
