Kakkada Marathon: ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಪ್ರಯುಕ್ತ ತತ್ವಂ ಅಸಿ ಚಾರಿಟೇಬಲ್ ಟ್ರಸ್ಟ್ ಮತ್ತು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಕಕ್ಕಡ ಮ್ಯಾರಥಾನ್ ಸ್ಪರ್ಧೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಮ್ಯಾರಥಾನ್ ಸ್ಪರ್ಧೆಯಲ್ಲಿ 500ಕ್ಕೂ ಅಧಿಕ ಓಟಗಾರರು ಭಾಗವಹಿಸಿದರು. ಇದೇ ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದ್ದ ಮ್ಯಾರಥಾನ್ ಸ್ಪರ್ಧೆಯು 1 ಕಿಮೀ, 3 ಕಿಮೀ, 5 ಕಿಮೀ, 10 ಕಿ ಮೀ ಆಯೋಜನೆ ಮಾಡಲಾಗಿತ್ತು.
ಕೊಡಗು ಜಿಲ್ಲೆಯಿಂದ ಅಲ್ಲದೆ ಹೊರ ಜಿಲ್ಲೆಯಿಂದಲೂ ಸ್ಪರ್ಧಿಗಳು ಆಗಮಿಸಿ ಬೆಳಗಿನಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೆ ಪುಟಾಣಿ ಮಕ್ಕಳು ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ, ಬೆಕ್ಕೆಸೊಡ್ಲೊರು ಶ್ರೀ ಶಾರದ ಪ್ರೌಢಶಾಲೆ ವರೆಗೆ 10 ಕಿ.ಮೀ. ಚಿಕ್ಕಮುಂಡೂರುವಿನಿಂದ ಬೆಕ್ಕೆಸೂಡ್ಲೊರುವರೆಗೆ 5.ಕಿಮೀ. 3 ಕಿಮೀ ಕೋಟೂರುವಿನಿಂದ ಬೆಕ್ಕೆಸೂಡ್ಲೊರುವರೆಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಡಾ. ಮಾತಂಡ ಅಯ್ಯಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ ಮ್ಯಾರಥಾನ್ ಸ್ಪರ್ಧೆಗೆ ಚಾಲನೆಯನ್ನು ನೀಡಿದರು. ಐದು ವರ್ಷದ ಒಳಗಿನ ಮಕ್ಕಳಲ್ಲಿ ಕನವ್, ಕೊಳ್ಳಿಮಾಡ ವೇದ ಮಾದಪ್ಪ, ಆಯುರಾ ದೇಚಕ್ಕ ವಿಶೇಷ ಬಹುಮಾನಕ್ಕೆ, ಬಾಜನರಾದರು.
10 ವರ್ಷದ ಒಳಗಿನ ಮಕ್ಕಳ 3 ಕಿ.ಮೀ ಬಾಲಕರ ವಿಭಾಗದಲ್ಲಿ ಪ್ರಥಮ ತರಣ್ ಕಾರ್ಯಪ್ಪ, ದ್ವಿತೀಯ: ರೈಹೊನ್ ಕೆ ಎಸ್, ತೃತಿಯ : ಸಿಯೋನ್ ಬಿ.ಎಸ್,
ಬಾಲಕಿಯರ ವಿಭಾಗದಲ್ಲಿ ಪ್ರಥಮ : ಬಾನ್ವಿ ಮುತ್ತಮ್ಮ, ದ್ವಿತೀಯ: ಅದಿತಿ ಅಕ್ಕಮ್ಮ, ತೃತೀಯ : ರಿಯೋನ್ ದೇಚಮ್ಮ
16 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ: ಪ್ರಥಮ್ ಪೂವಯ್ಯ ಎಂಬಿ, ದ್ವಿತೀಯ : ಕೃಪಾಲ್ ಕೆ, ತೃತೀಯ : ನಿಖಿಲ್ ಬಿ ಶೆಟ್ಟಿ,
ಬಾಲಕಿಯರ ವಿಭಾಗದಲ್ಲಿ ಪ್ರಥಮ: ವಿದ್ಯಾ ಮಚ್ಚಮಾಡ, ದ್ವಿತೀಯ: ರಶ್ಮಿತ ವಿ ಎನ್, ತೃತೀಯ : ಚರಿಷ್ಮಾ ಕಾವೇರಮ್ಮ
ಐದು ಕಿಲೋಮೀಟರ್ ಮ್ಯಾರಥಾನ್ ಮಹಿಳಾ ವಿಭಾಗದಲ್ಲಿ ಪ್ರಥಮ: ಪ್ರತಿಕ್ಷ ಪೂವಮ್ಮ, ದ್ವಿತೀಯ : ಪ್ರೀತಿ ಕೆಬಿ ತೃತೀಯ : ಲೋಶಿಕ್ ಪೊನ್ನಪ್ಪ,
ಪುರುಷರ ವಿಭಾಗದಲ್ಲಿ ಪ್ರಥಮ: ನಿತಿನ್ ಯು.ಎಲ್. ದ್ವಿತೀಯ: ವೆಂಕಟೇಶ್ ಕೆಕೆ, ತೃತಿಯ : ತ್ರಿಶಾನ ಮಾದಪ್ಪ, 10 ಕಿ.ಮೀ , ಮ್ಯಾರಥಾನ್ ಮಹಿಳಾ ವಿಭಾಗದಲ್ಲಿ ಪ್ರಥಮ: ರಾಶಿ ಸಿಎಂ, ದ್ವಿತೀಯ: ಚೊಂದಮ್ಮ ಕೆ.ಟಿ, ತೃತಿಯ : ರಸೀನಾ ಐ ಯು,
ಪುರುಷರ ವಿಭಾಗದಲ್ಲಿ ಪ್ರಥಮ: ದರ್ಶನ್ ಎಸ್ ಡಿ ಎಂ ಕಾಲೇಜು, ದ್ವಿತೀಯ: ಗೌತಮ್ ಶೆಟ್ಟಿ ತೃತೀಯ : ನಿತಿನ್ ಕುಮಾರ್.
ಒಂದು ಕಿಲೋಮೀಟರ್ ಮ್ಯಾರಥಾನ್ ನಲ್ಲಿ ಪೆಮ್ಮಂಡ ಅಪ್ಪಿ ಹಾಗೂ ಸಂಸಾರ ವಿಶೇಷ ಬಹುಮಾನಕ್ಕೆ ಪಾತ್ರರಾದರು.ರೂ. 65000 ನಗದು ಬಹುಮಾನದೊಂದಿಗೆ ಪದಕ ಮತ್ತು ಪ್ರಮಾಣ ಪತ್ರ ಅಲ್ಲದೆ ಮಲೇಶಿಯನ್ ಹಲಸು ಗಿಡವನ್ನು ವಿಶೇಷವಾಗಿ ವಿಜೇತರಿಗೆ ನೀಡಲಾಯಿತು.
ಈ ಒಂದು ಮ್ಯಾರಥಾನ್ ಸ್ಪರ್ಧೆಯಲ್ಲಿ ತತ್ವಂ ಅಸಿ ಚಾರಿ ಟೇಬಲ್ ಸಂಸ್ಥೆಯೊಂದಿಗೆ ಅಂಜಿಗೆರಿ ನಾಡ್ ಕ್ಲಬ್ ನವರು ಮತ್ತು ಮಾಸ್ಟರ್ಸ್ ಮ್ಯಾರಥಾನ್ ಅಥ್ಲೆಟಿಕ್ ಅಸೋಸಿಯೇಷನ್ ಕೊಡಗು ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ಯಶಸ್ವಿಯಾಗಲು ಕಾರಣಕರ್ತರಾದರು.
ವಿಶೇಷವಾಗಿ ಹತ್ತು ವರ್ಷ ಒಳಪಟ್ಟ ಮೂರು ಕಿಲೋಮೀಟರ್ ಓಡಿದಂತಹ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು. ಈ ಮೊತ್ತವನ್ನು ನೆಲ್ಲಮಕ್ಕಡ ಶಂಖಿ ಪೂವಯ್ಯ ತಮ್ಮ ತಮ್ಮ ದಿವಂಗತ ಸಜಿ ನಾಣಯ್ಯ ಅವರ ಜ್ಞಾಪಕರ್ಥವಾಗಿ ನೀಡಿದರು.ಮತ್ತು ಸ್ಪರ್ಧೆಯಲ್ಲಿ ವಿಜೇತರಿಗೆ ಮಾಸ್ಟರ್ ಮ್ಯಾರಥಾನ್ ಅಥ್ಲೆಟಿಕ್ ಅಸೋಸಿಯೇಷನ್ ಕೊಡಗು ಇವರು ನೀಡಿದರು.
