Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ಎಸ್‌ಐಟಿ ಅಧಿಕಾರಿಗಳು 13 ಸ್ಥಳಗಳ ಪೈಕಿ 12 ಜಾಗಗಳಲ್ಲಿ ಅಗೆದು 13 ನೇ ಪಾಯಿಂಟ್‌ಗೆ ಬಂದಿದೆ. ಆರನೇ ಪಾಯಿಂಟ್‌ನಲ್ಲಿ 25ಮೂಳೆಗಳು ಸಿಕ್ಕಿದ್ದು ಬಿಟ್ಟರೆ ಬೇರ್ಯಾವ ಜಾಗದಲ್ಲಿ ಕೂಡಾ ಇಲ್ಲಿಯವರೆಗೆ ಯಾವುದೂ ಪತ್ತೆಯಾಗಿಲ್ಲ. ಇಂದು ಪಾಯಿಂಟ್ ಮಾಡಿದ ಅಂತಿಮ ಪಾಯಿಂಟ್ 13 ನೇ ಸ್ಥಳ ಅಗೆಯಲಿದ್ದಾರೆ.
ಹಾಗಾದರೆ ಇಂದೇ ಭೂಮಿ ಅಗೆಯುವ ಕಾರ್ಯ ಕೊನೆಗೊಳ್ಳುತ್ತಾ? ಒಂದು ವೇಳೆ ಇದು ಮುಕ್ತಾಯಗೊಂಡರೆ ಮುಂದೇನು ಎನ್ನುವ ಕುತೂಹಲ ಜನರಲ್ಲಿ ಮೂಡಿದೆ. ಹಾಗಾಗಿ ಇಂದು 13 ನೇ ಸ್ಥಳ ಮಹತ್ವ ಪಡೆದಿದೆ ಎನ್ನಬಹುದು.
ಪಾಯಿಂಟ್ ನಂಬರ್ 1 ರಲ್ಲಿ ಡೆಬಿಟ್ ಕಾರ್ಡ್, ಪಾನ್‌ಕಾರ್ಡ್ ಪತ್ತೆಯಾಗಿದ್ದರೆ, ಪಾಯಿಂಟ್ ನಂಬರ್ 6 ರಲ್ಲಿ 25 ಮೂಳೆ, ಬುರುಡೆ ಕುರುಹು ಪತ್ತೆಯಾಗಿದೆ. ಇದೆಲ್ಲ ಎಫ್‌ಎಸ್‌ಎಲ್ ಗೆ ರವಾನೆಯಗಿದೆ. ಪಾಯಿಂಟ್ ನಂಬರ್ 8 ರಲ್ಲಿ ಹರಿದ ಕೆಂಪು ಬಣ್ಣದ ಬ್ಲೌಸ್ ಪೀಸ್ ದೊರಕಿದೆ. ನಿನ್ನೆ 11, 12 ರಲ್ಲಿ ಯಾವುದೇ ಕಳೇಬರ ದೊರಕಿಲ್ಲ. ಇಂದು ಪಾಯಿಂಟ್ ನಂಬರ್ 13 ರಲ್ಲಿ ಅಗೆತದ ನಂತರ ಏನೂ ದೊರಕದಿದ್ದರೆ ದೂರುದಾರನ ವಿಚಾರಣೆ ಸಾಧ್ಯತೆಯಿದೆ. ಬೇರೆ ಬೇರೆ ಸ್ಥಳಗಳನ್ನು ತೋರಿಸಿ ಆ ಸ್ಥಳಗಳನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಲಿದ್ದಾರೆ.
ಹೊಸ ಸ್ಥಳದಲ್ಲಿ ಅಂದರೆ 14 ನೇ ಪಾಯಿಂಟ್‌ನಲ್ಲಿ 3 ಅಸ್ಥಿಪಂಜರ ದೊರಕಿದೆ ಎಂದು ವಕೀಲರು ಮಾಡಿದ ಆರೋಪಕ್ಕೆ ಏನಾದರೂ ತಿರುವು ದೊರಕುತ್ತಾ ಎನ್ನುವುದು ಮುಂದಿರುವ ಕುತೂಹಲ.
