Home » Puttur: ಪುತ್ತೂರು: ಆತ್ಮಹತ್ಯೆಗೆ ಶರಣಾದ ಪಶು ವೈದ್ಯೆ!

Puttur: ಪುತ್ತೂರು: ಆತ್ಮಹತ್ಯೆಗೆ ಶರಣಾದ ಪಶು ವೈದ್ಯೆ!

0 comments

Puttur: ಬಪ್ಪಳಿಗೆ ನಿವಾಸಿ ಚಾಟರ್ಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ ಪಶು ವೈದ್ಯೆ ಕೀರ್ತನಾ ಜೋಶಿ (27) ಸೋಮವಾರ ರಾತ್ರಿ ಮಂಗಳೂರಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೀರ್ತನಾ ಜೋಶಿ ಅವರ ಮೃತದೇಹವನ್ನು ಪುತ್ತೂರಿನ ಮನೆಗೆ ತಂದು, ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿದು ಬಂದಿದೆ. ಪಶುವೈದ್ಯಕೀಯದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿರುವ ಡಾ| ಕೀರ್ತನಾ ಜೋಶಿ ಅವರು ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಸೋಮವಾರ ತಡರಾತ್ರಿ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನು ಓದಿ: Uttarkashi cloudburst: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ: ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ – 60ಕ್ಕೂ ಅಧಿಕ ಗ್ರಾಮಸ್ಥರು, 8 ರಿಂದ 10 ಮಂದಿ ಯೋಧರೂ ನಾಪತ್ತೆ!

You may also like