8
Mangalore: ಪೊಲೀಸ್ ಕಾಸ್ಟೇಬಲ್ ಲಕ್ಷ್ಮೀ.ಜಿ.ಆರ್. ಅವರಿಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಘಟನೆ ಉಳ್ಳಾಲ ಠಾಣೆ ಬಳಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಸೋಮೇಶ್ವರ ನಿವಾಸಿ ಸುಕೇಶ್ ಎಂದು ತಿಳಿದು ಬಂದಿದೆ.ಈತ ಕಾರಿನಲ್ಲಿ ಠಾಣೆಯ ಆವರಣಕ್ಕೆ ಬಂದಿದ್ದ ವೇಳೆ ಇನ್ಸೆಕ್ಟರ್ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದರು.
ಇದರ ಬಳಿಕ ಪೊಲೀಸ್ ಕಾಸ್ಟೇಬಲ್ ಲಕ್ಷ್ಮೀ.ಜಿ.ಆರ್. ಬಳಿ ತೆರಳಿದ್ದು, ಈ ವೇಳೆ ಆತ ಸಿಬ್ಬಂದಿ ಗೆ ಅವಾಚ್ಯ ಶಬ್ದಗಳಿಂದ ಬೈದು ಏಕವಚನದಲ್ಲಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಹಲ್ಲೆಗೆ ಯತ್ನಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: Crime: ಐದು ವರ್ಷದ ಬಾಲಕಿ ಮೇಲೆ ಮಸೀದಿಯ ಮೌಲ್ವಿಯಿಂದ ಅತ್ಯಾಚಾರ!
