Home » Vitla: ವಿಟ್ಲ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ: ವ್ಯಕ್ತಿ ಗಂಭೀರ

Vitla: ವಿಟ್ಲ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ: ವ್ಯಕ್ತಿ ಗಂಭೀರ

0 comments

Vitla: ದ್ವಿಚಕ್ರ ವಾಹನದ ಟಯರ್‌ ಪಂಕ್ಚರ್‌ ಆಗಿದ್ದು, ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಪರ್ತಿಪ್ಪಾಡಿ ಬಳಿ ನಡೆದಿರುವ ಕುರಿತು ವರದಿಯಾಗಿದೆ.

ಕುಡ್ತಮುಗೇರಿನ ʼಪ್ರಗತಿ ಸ್ವೀಟ್ಸ್‌ʼ ಮಾಲೀಕ ಜಗನ್ನಾಥ ಶೆಟ್ಟಿಗಾರ್‌ ಎಂಬುವವರು ಗಾಯಗೊಂಡ ವ್ಯಕ್ತಿ.

ಸ್ಕೂಟರ್‌ನಲ್ಲಿ ಜಗನ್ನಾಥ್‌ ಶೆಟ್ಟಿಗಾರ್‌ ತೆರಳುತ್ತಿದ್ದಾಗ ಟಯರ್‌ ಪಂಕ್ಚರ್‌ ಆಗಿದ್ದು, ಹೀಗಾಗಿ ವಾಹನವನ್ನು ರಸ್ತೆಯ ಬದಿಯಲ್ಲಿ ನಿಂತಿದ್ದರು. ಆಗ ಪುತ್ತೂರಿನಿಂದ ಸಾಲೆತ್ತೂರು ಕಡೆಗೆ ಚಲಿಸುತ್ತಿದ್ದ ಕಾರು ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಜಗನ್ನಾಥ ಶೆಟ್ಟಿಗಾರ್‌ ಅವರನ್ನು ಸ್ಥಳೀಯರು ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆದರೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದು, ತನಿಖೆ ನಡೆಯುತ್ತಿದೆ.

 

ಇದನ್ನೂ ಓದಿ: Dharmasthala: ನನಗೆ ಗನ್‌ಮ್ಯಾನ್‌ ಭದ್ರತೆ ನೀಡಿ: ಎಸ್‌ಐಟಿ ಮುಂದೆ ಮಾಸ್ಕ್‌ಮ್ಯಾನ್‌ ಬೇಡಿಕೆ

You may also like