Marriage: ಬಿ.ಎಸ್ಸಿ. ಪರೀಕ್ಷೆ ಬರೆಯಲು ತೆರಳಿ ಬಳಿಕ ಮನೆಗೆ ಬಾರದೆ ಪಲ್ಲವಿ ಎಂಬ ಯುವತಿ ನಾಪತ್ತೆಯಾಗಿದ್ದಳು. ಆದರೆ ಈ
ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಜುಲೈ 23ರಂದು ಕಾಣೆಯಾಗಿದ್ದ, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬರು ಬಿ. ಗ್ರಾಮದ ನಿವಾಸಿಯಾಗಿರುವ ಪಲ್ಲವಿ ಜೈನ ಸಮುದಾಯಕ್ಕೆ ಸೇರಿದ್ದು, ಅದೇ ಊರಿನ ಮಶಾಕ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.
ಇದೀಗ ಪಲ್ಲವಿ ಸ್ವತಃ ನಾನು ಕಲಬುರಗಿಯ ಕೊಹಿನೂರು ಕಾಲೇಜಿನಲ್ಲಿ ಬಿಎಸ್ಸಿ 4ನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದೇನೆ. ನಾನು ಕಾಣೆಯಾಗಿದ್ದೇನೆ ಎಂದು ಪೋಷಕರು ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಇಷ್ಟಪಟ್ಟ ಹುಡುಗ ಮಶಾಕ್ ಜೊತೆ ಸ್ವಯಿಚ್ಛೆಯಿಂದ ಬಂದಿದ್ದೇನೆ. ಅವನೊಂದಿಗೆ ಮದುವೆ ಸಹ ಆಗಿದ್ದೇನೆ. ನಾನು ಬಂದಿರೋದಕ್ಕೆ ಮಶಾಕ್ ಗೆಳೆಯರು ಮತ್ತು ಅವರ ಕುಟುಂಬಕ್ಕೆ ತೊಂದರೆಯನ್ನು ನೀಡಲಾಗುತ್ತಿದೆ. ಯಾರಿಗೂ ತೊಂದರೆ ಕೊಡಬೇಡಿ. ಇದರಲ್ಲಿ ಅವರ ಹಸ್ತಕ್ಷೇಪವಿಲ್ಲ. ಇದು ನಮ್ಮಿಬ್ಬರ ನಿರ್ಧಾರವಾಗಿದೆ ಎಂದು ಪಲ್ಲವಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾಳೆ.
ಇದನ್ನು ಓದಿ: Death: ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಯುವಕ ಮೃತ್ಯು!
