BJP: ರಾಜ್ಯದಲ್ಲಿ ರಾಜ್ಬೇಶೆಟ್ಟಿ ನಿರ್ಮಾಣದ ಸು ಫ್ರಂ ಸೋ ಚಿತ್ರ ಸೂಪರ್ಹಿಟ್ ಕಂಡಿದೆ. ಅದರಲ್ಲೂ ಈ ಚಿತ್ರದ ಹಾಡುಗಳಂತೂ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಬಂದರೋ ಬಂದರೋ ಬಾವ ಬಂದರು’ ಹಾಡನ್ನಂತೂ ಎಲ್ಲಾ ಟ್ರೋಲಿಗರು, ರೀಲ್ಸ್ ಮಾಡುವವರು ಬಳಸಿ, ಚಚ್ಚಿ ಬಿಸಾಕಿದ್ದಾರೆ. ಯಾವುದೇ ವಿಡಿಯೋ ಹಾಕಿದರೂ ಕೂಡ ಆ ವಿಡಿಯೋಗೆ ಈ ಹಾಡು ಹೊಂದಿಕೊಳ್ಳುವುದೇ ಇದರ ವಿಶೇಷ. ಇದೀಗ ಈ ಸಾಂಗ್, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದು ರಾಹುಲ್ ಗಾಂಧಿಯನ್ನು ಟೀಕಿಸಲು ಬಿಜೆಪಿ ಈ ಹಾಡನ್ನು ಬಳಸಿಕೊಂಡಿದೆ.
ಹೌದು, ಬೆಂಗಳೂರು ಲೋಕಸಭಾ ಕ್ಷೇತ್ರ ಒಂದರಲ್ಲಿ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆರೋಪಿಸಿ ಇಂದು ಫ್ರೀಡಂ ಪಾರ್ಕ್ ನಲ್ಲಿ ಅವರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಹೀಗಾಗಿ ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರಿಗೆ ಬಿಜೆಪಿ ಕಾರ್ಟೂನ್ ವಿಡಿಯೋವನ್ನು ಹಾಕಿ, ‘ಬಂದರೋ ಬಂದರೋ ಬಾವ ಬಂದರು’ ಹಾಡನ್ನು ಸೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ. ಜೊತೆಗೆ ಈ ವಿಡಿಯೋಗೆ ಮತಗಳ್ಳರಿಂದ, ಮತಗಳ್ಳತನಕ್ಕಾಗಿ, ಮತಗಳ್ಳತನದ ವಿರುದ್ಧ ಹೋರಾಟ ಎಂದು ಕ್ಯಾಪ್ಶನ್ ನೀಡಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
View this post on Instagram
ಇದನ್ನು ಓದಿ: Dharmasthala: ಧರ್ಮಸ್ಥಳ: ದೂರುದಾರನ ಹೇಳಿಕೆಯಂತೆ ಹೊಸ ಜಾಗದಲ್ಲಿ ಕಾರ್ಯಾಚರಣೆ ಆರಂಭ!
