2
Udupi: ಶನಿವಾರ ಉಡುಪಿಯ (Udupi) ಶ್ರೀ ಕೃಷ್ಣ ಮಠದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಭಾರತ ಲಕ್ಷ್ಮಿ ಎಂಬ ಗೌರವ ಬಿರುದನ್ನು ಪ್ರದಾನ ಮಾಡಲಾಯಿತು.
ಪುತ್ತಿಗೆ ಮಠದ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಈ ಗೌರವವನ್ನು ನಿರ್ಮಲಾ ಸೀತಾರಾಮನ್‌ಗೆ ಪ್ರದಾನ ಮಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠಕ್ಕೆ ರೂಪಿಸಿದ ಮಠದ ಕಾಷ್ಠ ಯಾಳಿಯನ್ನು ಉದ್ಘಾಟಿಸುವ ಸಲುವಾಗಿ ನಿರ್ಮಲಾ ಸೀತಾರಾಮನ್ ಶನಿವಾರ ಉಡುಪಿಗೆ ಆಗಮಿಸಿದ್ದರು.
