Home » Tech summit: ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ ಟೆಕ್ ಶೃಂಗ ಸಭೆ ಆಯೋಜನೆ : ಸರ್ಕಾರದಿಂದ 28ನೇ ಆವೃತ್ತಿ ಘೋಷಣೆ

Tech summit: ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ ಟೆಕ್ ಶೃಂಗ ಸಭೆ ಆಯೋಜನೆ : ಸರ್ಕಾರದಿಂದ 28ನೇ ಆವೃತ್ತಿ ಘೋಷಣೆ

0 comments

Tech summit: ಕಳೆದ ಒಂದು ತಿಂಗಳಿಂದ ಕರ್ನಾಟಕವನ್ನ ಸ್ಕಿಲ್ ಹಾಗೂ ನಾಲೇಜ್ ಕ್ಯಾಪಿಟಲ್ ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಗ್ಲೋಬಲ್ ಅಲಯನ್ಸ್ ಜೊತೆ ದೆಹಲಿಯಲ್ಲಿ ಮೀಟಿಂಗ್ ಮಾಡಿದ್ವಿ. ದೆಹಲಿಯಲ್ಲಿ ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮ ಮಾಡಿದ್ವಿ. ಈ ಮೂಲಕ ದೆಹಲಿಯಲ್ಲಿ ಇರುವ ಎಲ್ಲಾ ರಾಯಬಾರಿಗಳಿಗೆ ಟೆಕ್ ಶೃಂಗ ಸಭೆಗೆ – 28 ಆವೃತ್ತಿಗೆ ಆಹ್ವಾನ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕರ್ನಾಟಕದ ಶಕ್ತಿ ಏನು..? ಕರ್ನಾಟಕದಲ್ಲಿ ಹೂಡಿಕೆ ಮಾಡಿದ್ರೆ ಆಗುವ ಲಾಭ ಏನು ಅಂತ ಅವರಿಗೆ ತಿಳಿಸಿದ್ದೆವು. ಉತ್ತಮವಾದ ಪ್ರತಿಕ್ರಿಯೆ ಬಂದಿದೆ. ಇಂದು ಸ್ಥಳೀಯವಾಗಿ ಉದ್ಯಮಗಳ ಸಿಇಓಗಳ ಜೊತೆ ಮಾತುಕತೆ ಮಾಡಿದ್ದೇವೆ. ಅವರ ಸಲಹೆ ಪಡೆದಿದ್ದೇವೆ, ಅವರ ಸಲಹೆ ಮೇರೆಗೆ ಮುಂದಿನ ಆಕ್ಷನ್ ಪ್ಲಾನ್ ಮಾಡ್ತೇವೆ ಎಂದು ಖರ್ಗೆ ಹೇಳಿದರು.

ಸರ್ಕಾರ ಹೂಡಿಕೆಗಳ ಬಗ್ಗೆ ಗಂಭೀರವಾಗಿದೆ ಎಂದು ತಿಳಿಸೋ ಸಲುವಾಗಿ ಇದನ್ನು ಮಾಡ್ತಿದ್ದೇವೆ.ಇಷ್ಟು ದೊಡ್ಡ ಮಾನವ ಸಂಪನ್ಮೂಲ ಇದೆ, ಈ ವಲಯದಲ್ಲಿ ಹೆಚ್ಚು ಸಂಪಾದನೆ ಮಾಡಿದ್ದೇವೆ. ಇದನ್ನ ದೊಡ್ಡ ಮಟ್ಟದಲ್ಲಿ ಮಾಡುವ ಕಾರಣದಿಂದ ಅಶೋಕ ಹೋಟೆಲ್ ನಿಂದ ಪ್ಯಾಲೇಸ್ ಗ್ರೌಂಡ್ ಗೆ ಶಿಫ್ಟ್ ಮಾಡಿದ್ವಿ.ಈ ಬಾರಿ ಹೆಚ್ಚು ಆಕರ್ಷಣೆ ಬೆಂಗಳೂರಿನ ಮೇಲೆ ಇದೆ ಎಂದರು.

ಹೀಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಮಾಡಬೇಕು ಅಂತ BIEC ನಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ. ಈ ವರ್ಷ ನವೆಂಬರ್ 18 ರಿಂದ 20ನೇ ತಾರೀಕು ನಡೆಯಲಿದೆ. ಈ ವರ್ಷ ಸುಮಾರು ಒಂದು ಲಕ್ಷ ಜನ ನಿರೀಕ್ಷೆ ಮಾಡಿದ್ದೇವೆ. 20 ಸಾವಿರ ನವೋದ್ಯಮಗಳನ್ನ ಒಟ್ಟಿಗೆ ಸೇರಿಸುವ ಗುರಿ ಇದೆ. 1000+ ಹೂಡಿಕೆದಾರರು ಇರ್ತಾರೆ. 1200+ ಎಕ್ಸಿಬಿಟರ್ಸ್ ಇರ್ತಾರೆ. ಈ ವರ್ಷ FUTURISE ಫ್ಯೂಚರೈಸ್ ಥೀಮ್ ನಲ್ಲಿ ಮಾಡ್ತಿದ್ದೇವೆ. ಅಂದರೆ ಭವಿಷ್ಯದ ಉದಯ ಎಂಬ ಥೀಮ್ ನಲ್ಲಿ ಮಾಡ್ತೇವೆ ಎಂದರು.

ಕಳೆದ ಬಾರಿ 51 ರಾಷ್ಟ್ರಗಳು ಭಾಗಿಯಾಗಿದ್ವು, ಈ ಬಾರಿ ಈಗಾಗಲೇ 55 ರಾಷ್ಟ್ರಗಳು ಈಗಾಗಲೇ ಬರುವ ತೀರ್ಮಾನ ತಿಳಿಸಿದ್ದಾರೆ. ಒಟ್ಟು 65 ರಾಷ್ಟ್ರಗಳು ಭಾಗಿಯಾಗುವ ಸಾಧ್ಯತೆ ಇದೆ. ಇವತ್ತು ಬ್ರೇಕ್ ಫಾಸ್ಟ್ ವಿತ್ ಸಿಇಓ ಯಶಸ್ವಿಯಾಗಿದೆ. ಮಾನವ ಸಂಪನ್ಮೂಲವನ್ನು ರೀ ಸ್ಕಿಲ್ ಮಾಡಬೇಕು ಅಂತ ಹೇಳಿದ್ದಾರೆ. ಪ್ರಾದೇಶಿಕವಾರು ಕೇಂದ್ರಗಳನ್ನ ಮಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ಸಂಶೋಧನೆಗೆ ಹೆಚ್ಚು ಅನುದಾನ ಬೇಕು ಅಂತ ಕೇಳಿದ್ದಾರೆ. ಬಿಯಾಂಡ್ ಬೆಂಗಳೂರು ಎನ್ನುವ ನ್ಯಾನೋ ಕೆಮಿಕಲ್ ಸೆಂಟರ್ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡ್ತಿದ್ದೇವೆ ಎಂದು ಮಾಹಿತಿ‌ ನೀಡಿದರು.

 

 

 

 

 

You may also like