2
Crime: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜಾನುವಾರುಗಳ ಕತ್ತು ಕೊಯ್ದು ವಿಕೃತಿ ಮೆರೆದ ಘಟನೆ ನಡೆದಿದೆ. ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ಘಟನೆ ಮಾಸುವ ಮುನ್ನವೇ ಕತ್ತು ಕುಯ್ಯುವ ಪ್ರಕರಣ ಬೆಳಕಿಗೆ ಬಂದಿದೆ.
ರಸ್ತೆಯ ಮಧ್ಯೆ ಎರಡು ಹಸುಗಳ ಕತ್ತು ಕೂಯ್ದು ಹತ್ಯೆ ಮಾಡಿ ಅಮಾನುಷ ಕೃತ್ಯ ಆಗಂತುಕರು ಮೆರೆದ ಘಟನೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಹೊರವಲಯ ರಸ್ತೆಯ ಮಧ್ಯೆ ಹಸುಗಳ ಭಾಗವನ್ನು ಅಪರಿಚಿತರು ಬಿಸಾಡಿ ಹೋಗಿರುತ್ತಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಗ್ರಾಮಸ್ಥರ ಕೂಡಲೆ ಮಾಹಿತಿ ನೀಡಿದ್ದು, ಗೋವುಗಳ ಹತ್ಯೆಯಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಮಾಡಲು ಹಾಗೂ ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.
