Home » Beluru Gopalakrishna: ಧರ್ಮಸ್ಥಳ ಪ್ರಕರಣ – ಹೆಣಗಳು ಸಿಗದಿದ್ದರೆ ಅನಾಮಿಕನನ್ನು ನೇಣಿಗೆ ಹಾಕಲಿ, ಕಾಂಗ್ರೆಸ್ ಶಾಸಕ ಹೇಳಿಕೆ!!

Beluru Gopalakrishna: ಧರ್ಮಸ್ಥಳ ಪ್ರಕರಣ – ಹೆಣಗಳು ಸಿಗದಿದ್ದರೆ ಅನಾಮಿಕನನ್ನು ನೇಣಿಗೆ ಹಾಕಲಿ, ಕಾಂಗ್ರೆಸ್ ಶಾಸಕ ಹೇಳಿಕೆ!!

0 comments

Beluru Gopalakrishna: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪ ಪ್ರಕರಣ ಸಂಬಂಧ ಅನೇಕ ರಾಜಕೀಯ ನಾಯಕರುಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ‘ಶವ ಸಿಗಲಿಲ್ಲವಾದರೆ ಆ ಅನಾಮಿಕ ವ್ಯಕ್ತಿಯನ್ನು ನೇಣಿಗೆ ಹಾಕಬೇಕು’ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಹಾಗೂ ಪೂಜ್ಯರಿಗೆ ಹಾನಿಯಾಗಲು ಬಿಡಲ್ಲ. ಇದೀಗ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ಕ್ ಮ್ಯಾನ್ ತಪ್ಪು ಮಾಹಿತಿ ನೀಡಿದ್ದರೇ ನೇಣಿಗೆ ಹಾಕಲಿ. ಈ ಪ್ರಕರಣದಲ್ಲಿ ಯಾವುದೇ ಮುಸ್ಲಿಂ ಸಂಘಟನೆಗಳ ಕೈವಾಡವಿಲ್ಲ. ಬಿಜೆಪಿಯವರು ಹಿಂದೂ-ಮುಸ್ಲಿಂ ಎಂದು ಬಿಂಬಿಸಲು ಹೊರಟಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.

ಅಲ್ಲದೆ ದೇವಸ್ಥಾನದ ಒಳಗಡೆ ಅಗೆಯಲು ಬಿಡುವುದಿಲ್ಲ ಎಂದ ಅವರು, ಧರ್ಮಸ್ಥಳದಲ್ಲಿ ಸೌಜನ್ಯಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೊಡ್ಡ ಹೋರಾಟ ನಡೆದಿದೆ. ಈಗಿನ ಆರೋಪಗಳ ಕುರಿತು ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಎಸ್‍ಐಟಿ ತನಿಖೆಗೆ ಕೊಟ್ಟಿದೆ ಅಷ್ಟೇ ಎಂದು ತಿಳಿಸಿದರು.

Dharmasthala: ಧರ್ಮಸ್ಥಳ: ಹಲ್ಲೇ ,ಕೊಲೆಯತ್ನ ಆರೋಪ: ಪೊಲೀಸ್ ದೂರು ನೀಡಿದ ಜಯಂತ್ ಟಿ

You may also like