Home » Vijayapura: ಹಿಂದೂ ಯುವಕ, ಮುಸ್ಲಿಂ ಯುವತಿ ಮದುವೆ ವಿಚಾರ – ಯತ್ನಾಳ್ ತನ್ನ ಪತ್ನಿಯನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸಲಿ ಎಂದ ಮುಸ್ಲಿಂ ಮುಖಂಡ!!

Vijayapura: ಹಿಂದೂ ಯುವಕ, ಮುಸ್ಲಿಂ ಯುವತಿ ಮದುವೆ ವಿಚಾರ – ಯತ್ನಾಳ್ ತನ್ನ ಪತ್ನಿಯನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸಲಿ ಎಂದ ಮುಸ್ಲಿಂ ಮುಖಂಡ!!

0 comments

Vijayapura : ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಿಂದು ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷವನ್ನು ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಈ ವಿಚಾರದ ಕುರಿತು ವಿಜಯಪುರದಲ್ಲಿ ಮುಸ್ಲಿಂ ಮುಖಂಡ ಮತ್ತು ವಕೀಲ ಎಸ್ ಎಸ್ ಖಾದ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇತ್ತೀಚಿಗೆ ಕೊಪ್ಪಳದಲ್ಲಿ ಹತ್ಯೆಯಾದ ಗವಿಸಿದ್ದಪ್ಪ ನಾಯಕ್ ಅವರ ಮನೆಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಜೊತೆ ಭೇಟಿ ನೀಡಿ ಯತ್ನಾಳ್‌ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಯಾರೂ ಮುಸ್ಲಿಂ ಯುವತಿಯರನ್ನು ಪ್ರೀತಿ ಮಾಡಬಾರದಾ ? ಅವರನ್ನು ಮದುವೆ ಆಗಬಾರದೆಂದು ಏಲ್ಲಿದೆ ? ಇನ್ಮುಂದೆ ನಾವು ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವೆವು ಎನ್ನುವ ಅಭಿಯಾನ ಆರಂಭಿಸಲಿದ್ದೇವೆ ಎಂದು ಹೇಳೀಕೆ ನೀಡಿದ್ದರು.

ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ ಎಸ್ ಖಾದ್ರಿ, ಯತ್ನಾಳ್ ತನ್ನ ಪತ್ನಿಯನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸಲಿ ಕಾನೂನು ಬದ್ಧವಾಗಿ ತನ್ನ ಪತ್ನಿಯನ್ನು ವಿವಾಹ ಮಾಡಿಸಿದರೆ ಯಾವುದೇ ಚುನಾವಣೆಯಲ್ಲಿ ಯತ್ನಾಳ ವಿರುದ್ಧ ಮುಸ್ಲಿಮರು ಸ್ಪರ್ಧಿಸಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Dharmasthala case: 13ನೇ ಸ್ಥಳದಲ್ಲಿ ಜಿಪಿಆ‌ರ್ ಕಾರ್ಯಾಚರಣೆ ಮುಕ್ತಾಯ – ಯಾವುದೇ ಫಲ ಕೊಡದ ಜಿಪಿಆರ್‌ – ಜೆಸಿಬಿಯಲ್ಲೇ ಉತ್ಖನನ ಕಾರ್ಯ

You may also like