Home » Dharmasthala Case: ಧರ್ಮಸ್ಥಳ ಶವಪತ್ತೆ ಪ್ರಕರಣ – ತನಿಖೆ ಮುಗಿಯಲಿ, ಸದನದಲ್ಲಿ ಚರ್ಚೆಗೆ ಅವಕಾಶ ಕೊಡ್ತೀನಿ – ಸ್ಪೀಕರ್ ಖಾದರ್

Dharmasthala Case: ಧರ್ಮಸ್ಥಳ ಶವಪತ್ತೆ ಪ್ರಕರಣ – ತನಿಖೆ ಮುಗಿಯಲಿ, ಸದನದಲ್ಲಿ ಚರ್ಚೆಗೆ ಅವಕಾಶ ಕೊಡ್ತೀನಿ – ಸ್ಪೀಕರ್ ಖಾದರ್

0 comments

Dharmasthala Case: ಧರ್ಮಸ್ಥಳ ಸಾಮೂಹಿಕ ಅನಾಥ ಶವ ಹೂತಿಟ್ಟ ಪ್ರಕರಣ ಸಂಬಂಧ ವಿಧಾನ ಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್‌ ಯು ಟಿ ಖಾದರ್‌, ಈಗಾಗಲೇ ಈ ಕೇಸ್ ಬಗ್ಗೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ನಿನ್ನೆ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿದ್ವು‌, ಶೂನ್ಯವೇಳೆಯಲ್ಲಿ ಅವಕಾಶ ಕೊಟ್ಟಿದ್ದೆ. ಸರ್ಕಾರವೂ ಅದಕ್ಕೆ ಉತ್ತರ ಕೊಟ್ಟಿದೆ ಎಂದರು.

ಮತ್ತಷ್ಟು ಚರ್ಚೆಗೆ ಅವಕಾಶ ಬೇಕು ಅಂತ ಕೇಳಿದ್ದಾರೆ. ನಾನು ಚರ್ಚೆಗೆ ಅವಕಾಶ ಮಾಡಿಕೊಡ್ತೀನಿ. ಧರ್ಮಸ್ಥಳ‌ ಕೇಸ್ ನಲ್ಲಿ SIT ತನಿಖೆ ಮಾಡ್ತಿದೆ. SIT ತನಿಖೆ ಮಾಡೋದಕ್ಕೆ ಬಿಡಬೇಕು. ತನಿಖೆ ಮುಗಿಯೋ ಮುನ್ನವೇ ನಾವೇ ತೀರ್ಪು ಕೊಡೋದು ಸರಿಯಲ್ಲ. ಧಾರ್ಮಿಕ ಸ್ಥಳದ ಪವಿತ್ರತೆಯನ್ನ ಕಾಪಾಡೋದು ನಮ್ಮ ಕರ್ತವ್ಯ. ಈ ವಿಚಾರದಲ್ಲಿ ಯಾರು ಸ್ವಯಂ ಅಭಿಪ್ರಾಯ ಕೊಡಬಾರದು ಎಂದರು.

ತನಿಖೆ ಆಗೋವರೆಗೂ ಎಲ್ಲರೂ ಸಮಾಧಾನವಾಗಿ ಇರಬೇಕು. ನಾವು ಸಮಾನತೆ, ಸೋದರ ಭಾವನೆಯಲ್ಲಿ ಇರೋರು. ಹೀಗಾಗಿ ತನಿಖೆ ಆಗೋ ಮುನ್ನ ಯಾರು ಮಾತಾಡೋದು ಬೇಡ. ಸದನದಲ್ಲಿ ಧರ್ಮಸ್ಥಳದ ವಿಚಾರವಾಗಿ ಚರ್ಚೆಗೆ ಅವಕಾಶ ಕೊಡ್ತೀನಿ ಎಂದು ಸ್ಪೀಕರ್ ಖಾದರ್ ಹೇಳಿದರು.

Rahul Gandhi : ಬೀದಿ ನಾಯಿಗಳ ಪರ ರಾಹುಲ್ ಗಾಂಧಿ ಬ್ಯಾಟಿಂಗ್ – ರಾತ್ರಿ ಒಮ್ಮೆ ಗಲ್ಲಿಗೆ ಹೋಗಿ ನೋಡಿ ಎಂದ ನೆಟ್ಟಿಗರು

You may also like