Home » Dharmasthala : ಧರ್ಮಸ್ಥಳದಲ್ಲಿ ಹೂತಿಟ್ಟ ಹೆಣಗಳ ತನಿಖಾ ವರದಿ ಸಿದ್ದ – ಏನಿದೆ ಅದರಲ್ಲಿ?

Dharmasthala : ಧರ್ಮಸ್ಥಳದಲ್ಲಿ ಹೂತಿಟ್ಟ ಹೆಣಗಳ ತನಿಖಾ ವರದಿ ಸಿದ್ದ – ಏನಿದೆ ಅದರಲ್ಲಿ?

0 comments

Dharmasthala : ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣ (Dharmasthala Burials Case) – ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ದೂರು ನೀಡಿರುವ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇದೀಗ ಅನಾಮಿಕ ದೂರುದಾರನ ಹೇಳಿಕೆ ಆಧರಿಸಿ ಎಸ್.ಐ.ಟಿ (SIT) ತಂಡ ಹಲವು ಪಾಯಿಂಟ್‌ಗಳಲ್ಲಿ ಉತ್ಖನನ ಮಾಡಿ ಪ್ರಕರಣದ ವರದಿಯನ್ನು ಗೃಹಸಚಿವರಿಗೆ ಸಲ್ಲಿಸಿದೆ.

ಹೌದು, ಅನಾಮಿಕ ನೀಡಿದ ದೂರಿನ ಮೇಲೆ ರಾಜ್ಯ ಸರ್ಕಾರದಿಂದ ರಚನೆಯಾದ ಎಸ್‌ಐಟಿ 14 ದಿನಗಳಿಂದ ತನಿಖೆ ನಡೆಸುತ್ತಿದ್ದು, ಇಷ್ಟು ದಿನಗಳ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಾಂತಿ ಗೃಹಸಚಿವ ಜಿ. ಪರಮೇಶ್ವರ್‌ ಅವರಿಗೆ ಸಲ್ಲಿಸಿದ್ದಾರೆ.

ಇನ್ನು ಅನಾಮಿಕ ದೂರುದಾರ ಗುರುತು ಮಾಡಿದ್ದ ಒಟ್ಟು 16 ಪಾಯಿಂಟ್ ಗಳ ಪೈಕಿ 13 ನೇ ಪಾಯಿಂಟ್ ಬಿಟ್ಟು ಉಳಿದೆಲ್ಲಾ ಸ್ಥಳಗಳಲ್ಲೂ ತನಿಖಾ ತಂಡ ಶೋಧ ಕಾರ್ಯ ನಡೆಸಿತ್ತು. ನಿನ್ನೆ ಮತ್ತು ಇಂದು (ಆ.13) ಪಾಯಿಂಟ್ ನಂಬರ್ 13 ರಲ್ಲಿ ಶೋಧಕಾರ್ಯ ಮುಂದುವರೆದಿದ್ದು, ಅನಾಮಿಕ ಹೇಳಿದಂತೆ ಯಾವುದೇ ಅಸ್ಥಿಪಂಜರವೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಇನ್ಮುಂದೆ ಈ ಅನಾಮಿಕ ತೋರಿಸುವ ಸ್ಥಳಗಳಲ್ಲಿ ಉತ್ಖನನ ನಡೆಸುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಅಂದಹಾಗೆ ವಿಧಾನಸೌಧದ ಕಲಾಪದಲ್ಲೂ ಸಹ ಧರ್ಮಸ್ಥಳ ಎಸ್‌ಐಟಿ ತನಿಖೆಯ ಕುರಿತು ಚರ್ಚೆ ನಡೆದಿತ್ತು. ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಎಸ್‌ಐಟಿ ತನಿಖೆ ಎಲ್ಲಿಯವರೆಗೆ ಬಂದಿದೆ ಎಂಬ ವರದಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದರು.

ಸದ್ಯ ಅನಾಮಿಕ ತೋರಿಸಿದ 13 ಗುಂಡಿಗಳ ಪೈಕಿ ಅಂತಿಮ ಗುಂಡಿಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಈ ಸ್ಥಳದಲ್ಲಿ ಕಾರ್ಯಾಚರಣೆ ಮುಗಿದ ಬಳಿಕ ಎಸ್‌ಐಟಿ ಮುಂದೇನು ಮಾಡಲಿದೆ ಹಾಗೂ ಎಸ್‌ಐಟಿ ಗೃಹ ಸಚಿವರಿಗೆ ಸಲ್ಲಿಸಿದ ವರದಿಯಲ್ಲಿ ಏನಿದೆ ಎಂಬ ಪ್ರಶ್ನೆ ಎದ್ದಿದೆ.

Rajeev Kumar: ಮತಗಳ್ಳತನ ಆರೋಪ – ದೇಶ ತೊರೆದರೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್?

You may also like