Darshan Case: ದರ್ಶನ್ ಅಂಡ್ ಗ್ಯಾಂಗ್ ಗೆ ಸುಪ್ರೀಂ ನಿಂದ ಜಾಮೀನು ರದ್ದು ಹಿನ್ನೆಲೆ ದರ್ಶನ್ ಪರವಕೀಲರಿಂದ ಸರೆಂಡರ್ ಆಗಲು ಸಮಯ ಕೇಳಲು ಮನವಿ ಮಾಡಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಂದಿನ ಪ್ರೊಸೋಜರ್ ಏನಿದೆ ಗೊತ್ತಾ..? ಪೊಲೀಸ್ರ ಮುಂದಿನ ಕಾನೂನು ಕ್ರಮಗಳು ಹೇಗಿರಲಿದೆ ಗೊತ್ತಾ..? ಯಾವ ಜೈಲಿನಲ್ಲಿ ಹಾಕ್ತಾರೆ?
ಮೊದಲಿಗೆ ಸುಪ್ರೀಂ ಕೋರ್ಟ್ ನ ಜಾಮೀನು ರದ್ದು ಆದೇಶದ ಪ್ರತಿಯನ್ನು ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಪಡೆಯಲಿದ್ದು, ಆ ಬಳಿಕ ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನು ರದ್ದು ಆದೇಶದ ಪ್ರತಿ ಸಲ್ಲಿಕೆ ಮಾಡಲಿದ್ದಾರೆ. ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ರದ್ದಾಗಿರೊ ಬಗ್ಗೆ ತಿಳಿಸಿ ಅರೆಸ್ಟ್ ವಾರೆಂಟ್ ನ್ನು ಪೊಲೀಸ್ರು ಪಡೆಯುವ ಸಾಧ್ಯತೆ ಇದೆ.
ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಪಡೆದು ಕಾಮಾಕ್ಷಿಪಾಳ್ಯ ಪೊಲೀಸ್ರು ದರ್ಶನ್ ಅಂಡ್ ಗ್ಯಾಂಗ್ ನ ಅರೆಸ್ಟ್ ಮಾಡಲಿದ್ದಾರೆ. ಮೊದಲಿಗೆ ಬೆಂಗಳೂರು ಜೈಲಿಗೆ ಹಾಕ್ತಾರೆ ನಂತರ ಅಲ್ಲಿಂದ ಬಳ್ಳಾರಿ ಜೈಲಿಗೆ ಹಾಕುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಅದಕ್ಕೂ ಮೊದಲೇ ಒಂದು ವೇಳೆ ಆರೋಪಿಗಳು ಸರೆಂಡರ್ ಆದ್ರೆ ಅರೆಸ್ಟ್ ವಾರೆಂಟ್ ಪಡೆಯುವ ಅವಶ್ಯಕತೆ ಇಲ್ಲಿ ಬರೋದಿಲ್ಲ. ಬಳಿಕ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ನಂತರ ಪೊಲೀಸ್ರು ಜೈಲಿಗೆ ಬಿಡಲಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಆಯಾ ಜೈಲುಗಳಿಗೆ ಆರೋಪಿಗಳನ್ನ ಮತ್ತೆ ವರ್ಗಾಯಿಸಲಿದ್ದಾರೆ ಪೊಲೀಸ್ರು.
ಸದ್ಯ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿರುವ ತನಿಖಾಧಿಕಾರಿ ಎಸಿಪಿ ಚಂದನ್. ಹೀಗಾಗಿ ಬೇರೊಬ್ಬ ಅಧಿಕಾರಿಗೆ ಸೂಚನೆ ನೀಡುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಸುಪ್ರೀಮ್ ಕೋರ್ಟ್ ಆರ್ಡರ್ ಕೈಗೆ ಸಿಕ್ಕ ತಕ್ಷಣ ಪೊಲೀಸರು ಬಂಧಿಸಬೇಕೆಂದು ಕೋರ್ಟ್ ತಾಕೀತು ಮಾಡಿದೆ. ಹಾಗಾಗಿ ಈಗ ಆರೋಪಿಗಳು ಎಲ್ಲಿದ್ದಾರೆ ಎಂದು ಅವರ ವಿಳಾಸವನ್ನು ಕಂಡು ಹಿಡಿಯುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ.
ಅಂದು ಅರೆಸ್ಟ್ ಆದೇಶ ಮಾಡಿದ್ದೇ ಎಡಿಜಿಪಿ ದಯಾನಂದ್. ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದು ಖಾತ್ರಿಯಾಗ್ತಿದ್ದಂತೆ ಮುಲಾಜಿಲ್ಲದೆ ಅರೆಸ್ಟ್ ಮಾಡಿಸಿದ್ದ ದಯಾನಂದ್ . ಇಂದು ಮತ್ತೆ ಬಳ್ಳಾರಿ ಜೈಲಿನ ಎಡಿಜಿಪಿಯಾಗಿರುವ ದಯಾನಂದ್ ಕೆಳಗೆ ತೆರಳಬೇಕಾಗಿದೆ ದರ್ಶನ್ ಗ್ಯಾಂಗ್.
ಅಂದು ದಯಾನಂದ್ ಕೈಗೆ ಸಿಲುಕಿ ವಿಲ ವಿಲನೆ ಒದ್ದಾಡಿದ್ದ ದರ್ಶನ್, ಇಂದು ಮತ್ತೆ ಅದೇ ದಯಾನಂದ್ ಕೈ ಕೆಳಗೆ ಸಿಲುಕಿಕೊಂಡ ದರ್ಶನ್ ಗೆ ಪ್ರಾಣ ಸಂಕಟ ಎದುರಾಗಿದೆ.
