Dharmasthala Case: ಧರ್ಮಸ್ಥಳ ಅಸ್ಥಿ ಪಂಜರ ಹುಡುಕಾಟ ಪ್ರಕರಣ ಸಂಬಂಧ ಸರ್ಕಾರ ಮಧ್ಯಂತರ ವರದಿಯನ್ನು ಎಸ್ಐಟಿ ತಂಡದಲ್ಲಿ ಕೇಳಿತ್ತು. ಗೃಹ ಸಚಿವ ಪರಮೇಶ್ವರ್ ರಿಂದ ಮಧ್ಯಂತರ ವರದಿ ನೀಡುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಗೃಹ ಸಚಿವರನ್ನು ಎಸ್.ಐ.ಟಿ ಅಧಿಕಾರಿಗಳು ಭೇಟಿ ಮಾಡಿ ವರದಿಯನ್ನು ಒಪ್ಪಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.
ಸಿಎಂ ಸಿದ್ದರಾಮಯ್ಯ ಅವರನ್ನೂ ಕೂಡ ಎಸೈಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ, ತನಿಖಾಧಿಕಾರಿ ಅನುಚೇತ್ ಭೇಟಿಯಾಗಿದ್ದರು. ಇನ್ನೂ ಎಷ್ಟು ಅಗೆದು ನೋಡುತ್ತೀರಿ? ಇದುವರೆಗೆ ಏನಾದರೂ ಸಿಕ್ಕಿದೆಯಾ? ಎಂಬ ಮಾಹಿತಿಯನ್ನು ಪರಮೇಶ್ವರ್ ಕೇಳಿದ್ದಾರೆ. ಇಂದು ಸಂಜೆ 4 ಗಂಟೆ ವೇಳೆಗೆ ಮುಂದಿನ ನಡೆಯನ್ನು ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ.
ಇನ್ನು ದೂರುದಾರನನ್ನು ಬ್ರೈನ್ ಮಾರ್ಫಿಂಗ್ ಮಾಡುವ ಬಗ್ಗೆ ಮಾತನಾಡಿದ ಗೃಹಸಚಿವರು ಈ ಬಗ್ಗೆ ಇನ್ನು ವಿಶೇಷ ಅನುಮತಿಯನ್ನು ಪಡೆದಿಲ್ಲ . ಅದನ್ನು ಎಸ್ಐಟಿನವರೇ ನಿರ್ಧಾರ ಮಾಡುತ್ತಾರೆ. ಒಂದು ವೇಳೆ ಅಗತ್ಯತೆ ಇದ್ದರೆ ಅವರೇ ಮಾಡಿಕೊಳ್ಳುತ್ತಾರೆ ಎಂದರು.
ಇನ್ನು ಮಧ್ಯಂತರ ವರದಿ ನೀಡುವಂತೆ ಬಿಜೆಪಿ ಪಟ್ಟು ಹಿಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹಸಚಿವರು, ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಒತ್ತಡಕ್ಕೆ ಮಣಿಯಲು ಆಗುವುದಿಲ್ಲ. ಸರಿ ಹೋಗೋದು ಇಲ್ಲ. ಮಧ್ಯಂತರ ವರದಿಯನ್ನ ನೀಡಬೇಕು ಬೇಡವೋ ಅನ್ನೋದನ್ನು ಕೂಡ ಎಸ್ಐಟಿ ಅವರೇ ಡಿಸೈಡ್ ಮಾಡುತ್ತಾರೆ ಎಂದು ಹೇಳಿದರು.
