D K Shivkumar : ಧರ್ಮಸ್ಥಳದ (Dharmasthala) ಸುತ್ತಮುತ್ತಲು ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ (case) ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (Dk Shivakumar) ಅವರು ಸ್ಫೋಟಕ ಹೇಳಿಕೆ (statement) ನೀಡಿದ್ದಾರೆ.
ಹೌದು, ಧರ್ಮಸ್ಥಳ ಎಸ್‌ಐಟಿ ತನಿಖೆ ಕುರಿತು DCM ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದು ಒಂದು ದೊಡ್ಡ ಷಡ್ಯಂತ್ರ. ಯಾರದ್ದು ಎಂದು ನಾನು ಹೇಳುವುದಿಲ್ಲ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಈ ಕುರಿತಾಗಿ ಮಾತನಾಡಿದವರು ಧರ್ಮಸ್ಥಳದ ಪ್ರಕರಣದಲ್ಲಿ ಏನೂ ಇಲ್ಲ. ವೆಲ್ ಪ್ಯಾನ್ಡ್ ಆಗಿ ಷಡ್ಯಂತ್ರ ನಡೆದಿದೆ. ಧರ್ಮಸ್ಥಳದ ಬಗ್ಗೆ ಕಪ್ಪು ಚುಕ್ಕೆ ತರುವ ಪ್ರಯತ್ನ ನಡೆದಿದೆ. ನೂರಾರು ವರ್ಷಗಳಿಂದ ಧರ್ಮಸ್ಥಳದಲ್ಲಿ ನಡೆದುಕೊಂಡ ದೊಡ್ಡ ಪರಂಪರೆ ಇದೆ. ಯಾರೇ ಆಗಲಿ ತೇಜೋವಧೆ, ಹಾಳು ಮಾಡಲು ಹೊರಟಿರುವುದ ಸರಿಯಲ್ಲ. ನಾನಾಗಲಿ, ಸಿಎಂ ಸಿದ್ದರಾಮಯ್ಯ ಅವರು ಸಹ ಯಾರು ಧರ್ಮಸ್ಥಳದ ವಿಚಾರದಲ್ಲಿ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೋ, ಆಳವಾಗಿ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದಾಗಿ ಡಿಸಿಎಂ ವಿವರಿಸಿದ್ದಾರೆ.
ಅಲ್ಲದೆ ಇದೆಲ್ಲ ಬರೀ ಪೆಟ್ಟಿಗೆ ಖಾಲಿ ಅದು ಕೇಸ್, ಏನು ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ ಆಗಲಿ, ಹಿಂದೂ ಧರ್ಮ ಮಾತ್ರವಲ್ಲ. ಯಾವ ಧರ್ಮದ ಭಾವನಗೆ ಚ್ಯುತಿ ಬರಬಾರದು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಏನು ಇಲ್ಲದೇ ಇದೊಂದು ಮಾಡಿದ್ದಾರೆ, ಅದು ಕೂಡ ನಮ್ಮ ಅರಿವಿದೆ.
ಕೋರ್ಟ್ ನಲ್ಲಿರೋದ್ರಿಂದ ಪ್ರೊಫೆಷನಲ್ ಆಗಿರಲಿ ಅಂತಾ ತನಿಖೆ ಮಾಡುತ್ತಿದ್ದಾರೆ. ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಅವರದ್ದೇಯಾದ ವ್ಯಾಖ್ಯಾನ ಮಾಡಿದ್ದಾರೆ ಅದನ್ನು ನಾನು ಕಮೆಂಟ್ ಮಾಡೋಕೆ ಹೋಗಲ್ಲ. ಅವರಿಗೆ ಬಹಳ ಅನ್ಯಾಯ ಆಗಿದೆ. ಧರ್ಮಸ್ಥಳ ಆಗಲಿ, ಯಾವುದೇ ಕ್ಷೇತ್ರದ ಗೌರವ, ತೊಂದರೆ ಆಗೋದಕ್ಕೆ ಅವಕಾಶ ಕೊಡಲ್ಲ. ನ್ಯಾಯದ ಬಗ್ಗೆ ಧರ್ಮದ ಬಗ್ಗೆ ಸರಿಸಮಾನವಾಗಿದ್ದೇವೆ. ಸರಿಸಮಾನವಾಗಿ ಪಕ್ಷ ಮತ್ತು ಸರ್ಕಾರ ಇದೆ ಎಂದು ಡಿಸಿಎಂ ಹೇಳಿಕೆ ಕೊಟ್ಟಿದ್ದಾರೆ.
