Yatnal: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟಿರುವ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಎಸ್ ಐ ಟಿ ತನಿಖೆ ಕೂಡಲೇ ರದ್ದು ಮಾಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ನಿಯಮ 69 ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, “ಹಿಂದೂಗಳು ಕಾದು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ್ರಾಂತಿ ಆಗಲಿದೆ. ಧರ್ಮಸ್ಥಳಕ್ಕೆ ಕೈ ಹಾಕಿದರೆ ಸರ್ಕಾರದ ಬುಡಕ್ಕೆ ಬರುತ್ತದೆ ಗ್ಯಾರಂಟಿ” ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಎಸ್‌ಐಟಿ ಮಾಡಿದ್ದೇ ಸರ್ಕಾರ ಮೊದಲು ತಪ್ಪು. ಮೊದಲು ಅನಾಮಿಕನ ಬಗ್ಗೆ ತನಿಖೆ ಮಾಡಬೇಕಿತ್ತು. ಹಿಂದೆ ಮೊಗಲರು ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ನಡೆಸಿದ್ದರು. ಆಧುನಿಕ ಮೊಗಲರು ಹಿಂದೂ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡ್ತಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದರು.
ಜೊತೆಗೆ ಹಿಂದೂ ಸಮಾಜವನ್ನು ಆದಷ್ಟು ಬೇಗ ನಾಶ ಪಡುವ ಹುನ್ನಾರ. ಇನ್ಮುಂದೆ ಧರ್ಮಸ್ಥಳದಲ್ಲಿ ಅಗೆಯೋಕೆ ಹೋದ್ರೆ ದೊಡ್ಡ ಕ್ರಾಂತಿ ಆಗುತ್ತದೆ.ಅಯೋಧ್ಯೆ ಯಲ್ಲಿ ಆದಂತೆ ಇಲ್ಲೂ ಆಗುತ್ತದೆ. ಸರ್ಕಾರದ ಕೊನೆಯ ದಿನಗಳು ಪ್ರಾರಂಭ ಆಗುತ್ತವೆ.ಇಂತಹ ಭಾವನೆ ಗಳ ಮೇಲೆ ಚೆಲ್ಲಾಟ ಆಡಬೇಡಿ ಎಂದು ಎಚ್ಚರಿಕೆ ನೀಡಿದರು.
