Home » Dharmasthala Case: ‘ಧರ್ಮಸ್ಥಳ ಚಲೋ’ಗೆ ಚಾಲನೆ – ಬಿಜೆಪಿಯಿಂದ ಅಪಪ್ರಚಾರ ಖಂಡನೆ – ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟ 500ಕ್ಕೂ ಹೆಚ್ಚು ಕಾರುಗಳು

Dharmasthala Case: ‘ಧರ್ಮಸ್ಥಳ ಚಲೋ’ಗೆ ಚಾಲನೆ – ಬಿಜೆಪಿಯಿಂದ ಅಪಪ್ರಚಾರ ಖಂಡನೆ – ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟ 500ಕ್ಕೂ ಹೆಚ್ಚು ಕಾರುಗಳು

0 comments

Dharmasthala Case: ಬಿಜೆಪಿ ಯಲಹಂಕ ವತಿಯಿಂದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ನೆಲಮಂಗಲ ಟೋಲ್‍ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ತನಕ ನಡೆಯುವ “ಧರ್ಮಸ್ಥಳ ಚಲೋ” ಅಭಿಯಾನಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಪೂಜಾ ವಿಧಿವಿಧಾನ ನೆರವೇರಿಸಿ ನೂರಾರು ವಾಹನಗಳ ಅಭಿಯಾನವನ್ನು ಆರಂಭಿಸಲಾಯಿತು.

ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ದೇಗುಲಕ್ಕೆ ಅಪಪ್ರಚಾರ ಎಸಗಲಾಗುತ್ತಿದೆ ಅಂತಾ ದೇಗುಲದ ಭಕ್ತರ ಆಕ್ರೋಶ ಹೆಚ್ಚಾಗಿದೆ. ಮತ್ತೊಂದು ಕಡೆ ಬಿಜೆಪಿ, ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಇನ್ನೊಂದು ಕಡೆ ಕೆಲ ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ ಧರ್ಮಸ್ಥಳ ಪರ ನಿಂತು ಹೋರಾಟಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

ಅಪಪ್ರಚಾರ ಖಂಡಿಸಿ ಯಾತ್ರೆ ನಡೆಯುತ್ತಿದ್ದು, ಸಂಜೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಕಾರುಗಳು ಜಮಾವಣೆಗೊಂಡಿದ್ದು, ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್‌ಗೇಟ್‌ನಿಂದ ಯಾತ್ರೆ ಹೊರಡಲಿವೆ. ಶಾಸಕ ಎಸ್.ಆರ್. ವಿಶ್ವನಾಥ್, ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಲೂರು ರಾಘವೇಂದ್ರ ಶೆಟ್ಟಿ, ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

You may also like