Home » Obituary: ಭೈರವೈಕ್ಯರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ – ಭಾವುಕರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

Obituary: ಭೈರವೈಕ್ಯರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ – ಭಾವುಕರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

0 comments

Obituary: ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ ಮಧ್ಯರಾತ್ರಿ 12.01ಭೈರವೈಕ್ಯರಾದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ 81 ವರ್ಷ ವಯಸ್ಸಾಗಿತ್ತು.

ಭೈರವೈಕ್ಯರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ನೆನೆದು ಶ್ರೀಗಳ ಉತ್ತಾರಾಧಿಕಾರಿ ಪೀಠಾಧ್ಯಕ್ಷರಾದ ನಿಶ್ಚಲಾನಂದನಾಥ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನಮ್ಮ ಗುರುಗಳು ನೀಡಿದ್ದಾರೆ. ನಿರ್ಗತಿಕ ಮಕ್ಕಳ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ತಾವೇ ಕೃಷಿ ಮಾಡಿ, ಅನ್ನದಾಸೋಹ ಮಾಡುತ್ತಿದ್ದರು ಎಂದು ಹೇಳಿದರು.

ನಿರ್ಮಲಾನಂದಸ್ವಾಮೀಜಿ, ನಿರ್ಮಾಮಡಿ ಮಠದ ಸ್ವಾಮೀಗಳ ಆಗಮಿಸಿದ್ದು, ನಾಥ ಪರಂಪರೆಯಂತೆ ವಿಧಿವಿಧಾನಗಳು ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀಗಳ ಉತ್ತರಾಧಿಕಾರಿ ಪೀಠಾಧ್ಯಕ್ಷರಾದ ನಿಶ್ಚಲಾನಂದನಾಥ ಸ್ವಾಮೀಜಿ ಅವರಿಂದ ಅಂತ್ಯ ಸಂಸ್ಕಾರದ ವಿಧಿ ವಿಧಾನ ನೆರವೇರಲಿದೆ. ನಾಡಿನ ಗಣ್ಯರು, ರಾಜಕೀಯ ನಾಯಕರು ಶ್ರೀಗಳ ಸಾವಿಗೆ ಕಂಬನಿ ಮಿಡಿದಿದ್ದು, ಅಪಾರ ಸಂಖ್ಯೆಯ ಭಕ್ತರು ತಮ್ಮ ಸ್ವಾಮಿಗಳನ್ನು ನೆನೆದು ಕಣ್ಣೀರಾಗಿದ್ದಾರೆ.

Parappan Agrahara: ನಿನ್ನೆ ಅನ್ನ ಸಾಂಬಾರ್- ಇಂದು ಚಿತ್ರಾನ್ನಾ – ಸಾಮಾನ್ಯ ಖೈದಿಗಳಂತೆ ಇದ್ದಾರಾ ದರ್ಶನ್‌, ಪವಿತ್ರಾ?

You may also like