Home » Dharmasthala Case: ‘ಧರ್ಮಸ್ಥಳ ಚಲೋ – ಇವತ್ತಿನವರೆಗೆ ಒಂದು ಲೆಕ್ಕ, ಇಂದಿನಿಂದ ಬೇರೆ ಲೆಕ್ಕ – ಎಸ್‌ ಆರ್‌ ವಿಶ್ವನಾಥ್

Dharmasthala Case: ‘ಧರ್ಮಸ್ಥಳ ಚಲೋ – ಇವತ್ತಿನವರೆಗೆ ಒಂದು ಲೆಕ್ಕ, ಇಂದಿನಿಂದ ಬೇರೆ ಲೆಕ್ಕ – ಎಸ್‌ ಆರ್‌ ವಿಶ್ವನಾಥ್

0 comments

Dharmasthala Case: ಸುಮಾರು 500ಕ್ಕೂ ಹೆಚ್ಚು ವಾಹನಗಳೊಂದಿಗೆ ಧರ್ಮಸ್ಥಳ ಚಲೋ ಯಾತ್ರೆ ಹೊರಟ ಬಿಜೆಪಿ ಶಾಸಕ ಎಸ್‌ ಆರ್‌ ವಿಶ್ವನಾಥ್‌ ಯಾತ್ರೆ ಮುನ್ನ ಮಾತನಾಡಿ, ಇವತ್ತಿನವರೆಗೆ ಒಂದು ಲೆಕ್ಕ, ಇಂದಿನಿಂದ ಬೇರೆ ಲೆಕ್ಕ. ಇಷ್ಟು ದಿನ ಸಹಿಸ್ಕೊಂಡ್ವಿ, ಇನ್ನುಮುಂದೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಯೂಟ್ಯೂಬ್ಬರ್ಸ್ ಗಳ ಬ್ಲೋ ಬಿಡ್ತಿವಿ. ಮನೆ ಒಳಗೆ ಕುಳಿತುಕೊಂಡು ವಿಡಿಯೊ ಮಾಡ್ತಾರೆ. ಹೊರಗಡೆ ಬಂದರೆ ಬೇರೆನೆ. ನಮ್ಮ ಕ್ಷೇತ್ರದ ಯೂಟ್ಯೂಬರ್ಸ್ ಗಳ ಬ್ಲೋ ಬಿಡ್ತೇವೆ. ಉಳಿದ ಕ್ಷೇತ್ರದಲ್ಲಿ ಯೂಟ್ಯೂಬ್ ರ್ಸ್ ಬ್ಲೋ ಆಯಾ ಕ್ಷೇತ್ರದವರರು ಮಾಡಬೇಕು. ತಡೆಯುವಷ್ಟು ತಡದಿದ್ದೇವೆ. ಮುಂದೆ ಮಂಜುನಾಥ ಏನು ಹೇಳುತ್ತಾನೊ ಹಾಗೆ ಮಾಡುತ್ತೇವೆ ಎಂದು ಶಾಸಕ ಹೇಳಿದರು.

ಎಸ್ ಐ ಟಿ ಗುಂಡಿ ಶೋಧ ಕಾರ್ಯ ಮುಕ್ತಾಯ ವಿಚಾರ ಎನ್ನುವ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್‌, ಕಾಂಗ್ರೆಸ್ ಸರ್ಕಾರಕ್ಕೆ ಹೇಳೋದು ಇಷ್ಟೇ, ಪ್ರತಿ ದಿನ ಒಂದು ಲಕ್ಷ ಕೇಸ್ ಬರ್ತಾ ಇವೆ. ಸದನದಲ್ಲಿ ನಾವು ಗಲಾಟೆ ಮಾಡಿದ್ರು ನೀವುಗಳು ಎಸ್ ಐ ಟಿ ಮಾಡಿರಲಿಲ್ಲ. ಸಿದ್ದರಾಮಯ್ಯ ಸುತ್ತ ಒಂದು ರೀತಿ ಟಿಪ್ಪು ಗ್ಯಾಂಗ್ ಸುತ್ತುವರೆದಿದೆ. ಡಿಕೆಶಿ ಅವರು ಷಡ್ಯಂತ್ರ ಅಂತಾ ಹೇಳಿದ್ದಾರೆ. ಡಿಕೆ ಹೇಳಿದ್ದಾರೆ ಅಂದ್ರೆ ಸರ್ಕಾರ ಒಪ್ಪಿಕೊಂಡಿದೆ ಎಂದರು.

ನಾನು ಸದನದಲ್ಲಿ ಡಿಮ್ಯಾಂಡ್ ಮಾಡ್ತೇನೆ. ಆ ಷಡ್ಯಂತ್ರ ಮಾಡಿದ್ರು ಯಾರು ಅಂತಾ ಹೇಳಬೇಕು. ಆ ಅನಾಮಿಕ ಹುಚ್ಚನಾ ಅಂತಾ ನೋಡಬೇಕಿತ್ತು. ಸುಮ್ಮನೇ ಎಸ್ ಐ ಟಿ ತನಿಖೆ ಮಾಡೋದಲ್ಲ. ಇಂದು ವಿಶ್ವನಾಥ್ ಧರ್ಮಸ್ಥಳಕ್ಕೆ ಹೋಗಿದ್ದಾರೆ. ನಾಳೆ ವಿಜಯೇಂದ್ರ ಅವರು ಹೋಗ್ತಿದ್ದಾರೆ. ನಾನು ಕೂಡ ಅಧಿವೇಶನ ಆದ ನಂತ್ರ ಹೋಗ್ತೇನೆ. ಪಾಪಿಗಳು ದೇವರ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅವರಿಗೆ ಸೂಕ್ತ ಶಿಕ್ಷೆ ಆಗೋವರೆಗೂ ನಾವು ಬಿಡಲ್ಲ ಎಂದರು.

ಯಾವುದೇ ಕಾರಣ ಎಸ್ಐಟಿ ಕ್ಲೋಸ್ ಮಾಡಬಾರದು. ತಿರುಪತಿ ಆಯ್ತು, ಅಯ್ಯಪ್ಪ ದೇವಸ್ಥಾನ ಆಯ್ತು. ಶನಿದೇವರನ್ನ ಕೂಡ ಮುಚ್ಚಲು ಹೋಗಿದ್ದರು. ಹಿಂದೂ ದೇವಾಲಯಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ. ಮುಸುಕುದಾರಿ ವ್ಯಕ್ತಿ ನಮ್ಮಗೆ ಮುಖ್ಯ ಅಲ್ಲ. ಆತನನ್ನು ಕಾಸು ಕೊಟ್ಟು ಕರೆದುಕೊಂಡು ಬಂದವ್ರೆ. ಆತನ ಹಿಂದೆ ಇರೋರು ಗೊತ್ತಾಗಬೇಕು ಎಂದು ಹೇಳಿದರು.

USA: ಅಮೇರಿಕಾದ ಸಿಯಾಟಲ್ ಗೋಪುರದ ಮೇಲೆ ಹಾರಿದ ತ್ರಿವರ್ಣ ಧ್ವಜ- ಇದೇ ಮೊದಲು ವಿದೇಶದ ಬಾವುಟ ಹಾರಟ

You may also like