Home » Dog Bite: ನಿಲ್ಲದ ಬೀದಿನಾಯಿಗಳ ಅಟ್ಟಹಾಸ: ಶಾಲೆಯ ಆವರಣದಲ್ಲಿ ಮಗುವನ್ನು ಕಚ್ಚಿದ ನಾಯಿ

Dog Bite: ನಿಲ್ಲದ ಬೀದಿನಾಯಿಗಳ ಅಟ್ಟಹಾಸ: ಶಾಲೆಯ ಆವರಣದಲ್ಲಿ ಮಗುವನ್ನು ಕಚ್ಚಿದ ನಾಯಿ

0 comments

Dog Bite: ಬೀದಿ ನಾಯಿಗಳ ಹಾವಳಿ ಕುರಿತಂತೆ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿನ (ದೆಹಲಿ-ಎನ್‌ಸಿಆರ್) ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಆಗಸ್ಟ್ 11ರಂದು ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು ಎಂದು ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಇವುಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ರೂಪಿಸಿರುವ ನಿಯಮಗಳ ಅನುಷ್ಠಾನದಲ್ಲಿ ಎನ್‌ಜಿಒಗಳು ಸೇರಿ ಎಲ್ಲರೂ ಹೊಣೆಗಾರಿಕೆ ನಿಭಾಯಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ನಾಯಿ ಕಾಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ನಾಯಿಗಳ ಹಾವಳಿಗೆ ಬಾಲಕನೋರ್ವ ಗಂಭೀರ ಗಾಯಗೊಂಡಿದ್ದಾನೆ. ಶಾಲೆಯ ಆವರಣದಲ್ಲಿ ನಾಯಿ ಮಗುವನ್ನು ಕಚ್ಚಿದ್ದು, ಈಗಾಗಲೇ ನಾಯಿಗಳು ಐದಾರು ಮಕ್ಕಳನ್ನು ಕಚ್ಚಿರುವ ಘಟನೆ ಈ ಹಿಂದೆ ನಡೆದಿದೆ.

ಕೊಪ್ಪಳದಲ್ಲಿ ಹಿಡಿದ ನಲವತ್ತು ನಾಯಿಗಳನ್ನು ತಳಕಲ್ ಬಳಿ ನಗರಸಭೆಯವರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ನಾಯಿಗಳು ಬಂದು ಮಕ್ಕಳನ್ನು ಕಚ್ಚುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಾಯಿ ಕಡಿದ ಮಗುವನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

UP: ಸಿಎಂ ಯೋಗಿ ಯನ್ನು ಹೊಗಳಿದ ಶಾಸಕಿ ಪೂಜಾ ಪಾಲ್ – ಪಕ್ಷದಿಂದಲೇ ಉಚ್ಛಾಟಿಸಿದ ಸಮಾಜವಾದಿ ಪಾರ್ಟಿ !!

You may also like