4
Ramalinga Reddy: ಧರ್ಮಸ್ಥಳ ಬಗ್ಗೆಯಾಗಲಿ, ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಎಸ್ಐಟಿ 14 ರಿಂದ 15 ಕಡೆ ಅಗೆದರೂ ಸಾಕ್ಷ್ಯ ದೊರಕಿಲ್ಲ. ಧರ್ಮಸ್ಥಳ ಕುರಿತಾಗಲೀ, ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ. ಒಂದು ಕ್ಲಾರಿಟಿ ಬೇಕು ಎಂದು ಎಸ್ಐಟಿ ರಚನೆ ಮಾಡಲಾಗಿದೆ. ಈ ಕುರಿತು ಸದನದಲ್ಲಿ ಪರಮೇಶ್ವರ್ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗಿಂತ ಕಾಂಗ್ರೆಸ್ನಲ್ಲಿ ಧರ್ಮಸ್ಥಳದ ಭಕ್ತರಿದ್ದಾರೆ. ಸೌಜನ್ಯ ಪ್ರಕರಣಕ್ಕೂ ನ್ಯಾಯ ಸಿಗಬೇಕು. ಯೂಟ್ಯೂಬರ್ಗಳು ಅಪಪ್ರಚಾರ ಮಾಡ್ತಿದ್ದಾರೆ. ಇವರ ವಿರುದ್ಧ ಕೇಸ್ ಹಾಕಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
