Home » Tirupati : ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 121 ಕೆಜಿ ಚಿನ್ನ ಅರ್ಪಿಸಿದ ಉದ್ಯಮಿ !!

Tirupati : ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 121 ಕೆಜಿ ಚಿನ್ನ ಅರ್ಪಿಸಿದ ಉದ್ಯಮಿ !!

0 comments

Tirupati : ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ. ಹಿ ಕುರಿತಾಗಿ ಸ್ವತಹ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೌದು, ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ‘ವೆಂಕಟೇಶ್ವರ ಸ್ವಾಮಿಯ ಭಕ್ತರೊಬ್ಬರು ಕಂ‍ಪನಿಯೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಕೃತಜ್ಞತೆಯ ಸಂಕೇತವಾಗಿ ದೇವರಿಗೆ ಚಿನ್ನವನ್ನು ದಾನ ಮಾಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನು ಇದೇನಣಿಗೆ ನೀಡಿದ ಹಾಗೂ ಹೆಸರು ಹೇಳಲು ಇಚ್ಚಿಸದ ಉದ್ಯಮಿ ಪ್ರತಿಕ್ರಿಯಿಸಿ ‘ನನ್ನ ಕಂಪನಿಯ ಶೇ 60ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ₹6,000 ಕೋಟಿಯಿಂದ ₹7,000 ಕೋಟಿ ಗಳಿಸಿದ್ದೇನೆ. ವೆಂಕಟೇಶ್ವರ ಸ್ವಾಮಿ ಅನುಗ್ರಹದಿಂದಲೇ ನಾನು ಇಷ್ಟೊಂದು ಸಂಪತ್ತನ್ನು ಗಳಿಸಿದ್ದೇನೆ. ಕೃತಜ್ಞತೆಯ ಸಂಕೇತವಾಗಿ ದೇವರಿಗೆ ಚಿನ್ನವನ್ನು ಕಾಣಿಕೆ ನೀಡಲು ನಿರ್ಧರಿಸಿದ್ದೇನೆ.ಪ್ರತಿದಿನ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು 120 ಕೆ.ಜಿ ತೂಕದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತದೆ ಎಂದು ಟಿಡಿಪಿ ಮುಖ್ಯಸ್ಥರು ಹೇಳಿದ್ದರು. ಹಾಗಾಗಿ ನಾನು 121 ಕೆ.ಜಿ ತೂಕದ ಚಿನ್ನವನ್ನು ಕಾಣಿಕೆ ನೀಡುತ್ತಿದ್ದೇನೆ’ ಎಂದು ಉದ್ಯಮಿ ಹೇಳಿದ್ದಾರೆ.

Terrorism: ಭಯೋತ್ಪಾದನೆಗೆ ₹101 ಕೋಟಿ ಹಣಕಾಸು ನೆರವು – ವಂಚನೆ ಆರೋಪದಲ್ಲಿ ಬಿಹಾರದ ತಂದೆ-ಮಗನನ್ನು ಬಂಧನ

You may also like