Home » Karnataka Gvt: SC ಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್- ಮೂರು ಗುಂಪುಗಳಾಗಿ ವಿಂಗಡಿಸಿ ʼಒಳಮೀಸಲಾತಿʼ ಹಂಚಿಕೆ !!

Karnataka Gvt: SC ಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್- ಮೂರು ಗುಂಪುಗಳಾಗಿ ವಿಂಗಡಿಸಿ ʼಒಳಮೀಸಲಾತಿʼ ಹಂಚಿಕೆ !!

0 comments

Karnataka Gvt : ರಾಜ್ಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದ ಒಳ ಮೀಸಲಾತಿ ವಿಚಾರಕ್ಕೆ ಇದೀಗ ಕೊನೆಗೊ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಖ್ಯಮಂತ್ರಿ (Chief Minister) ಸಿದ್ದರಾಮಯ್ಯ (Siddaramaiah) ಅವರ ಅಧ್ಯಕ್ಷತೆಯಲ್ಲಿ ನಿನ್ನೆ(ಆ.19) ನಡೆದ ಸಚಿವ ಸಂಪುಟ (Cabinet) ಸಭೆಯಲ್ಲಿ ಎಸ್​​​ಸಿ ಸಮುದಾಯದ ಒಳ ಮೀಸಲಾತಿ ಜಾರಿಗೆಗೆ ಸಂಪುಟವು ತೀರ್ಮಾನಿಸಿದೆ.

ಹೌದು, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಇದರೊಂದಿಗೆ ಕಳೆದ ಐದು ದಶಕದ ಕನಸು ನನಸಾಗಿದೆ. ಸದ್ಯದ ಮಾಹಿತಿ ಪ್ರಕಾರ ಐದು ಗುಂಪುಗಳ ಬದಲಾಗಿ ಮೂರು ವರ್ಗವನ್ನು ಮಾಡುವುದಕ್ಕೆ ಸಚಿವ ಸಂಪುಟ ನಿರ್ಧಾರ ಮಾಡಿದೆ ಎನ್ನಲಾಗಿದೆ.

ನಾಗಮೋಹನ್‌ ದಾಸ್‌ ಸಮಿತಿ ವರದಿಯಲ್ಲಿ ಒಳ ಮೀಸಲಾತಿಯನ್ನು 5 ಭಾಗವಾಗಿ ವರ್ಗೀಕರಣ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಮೂರು ಗುಂಪುಗಳಾಗಿ ವಿಂಗಡಿಸಿದೆ. ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯ ಶೇ.6, ಸ್ಪೃಶ್ಯ ಸಮುದಾಯಕ್ಕೆ ಶೇ. 5 ಒಳ ಮೀಸಲಾತಿ ನೀಡಲು ಅನುಮೋದನೆ ನೀಡಲಾಗಿದೆ. ಎಡಗೈ ಸಮುದಾಯದಲ್ಲಿ 18 ಜಾತಿಗಳಿದ್ದರೆ, ಬಲಗೈ ಸಮುದಾಯದಲ್ಲಿ 20 ಜಾತಿಗಳು ಹಾಗೂ ಸ್ಪೃಶ್ಯ ಸಮುದಾಯದಲ್ಲಿ 63 ಜಾತಿಗಳಿವೆ.

ಸಂಪುಟ ಸಭೆಯಲ್ಲಿ ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ 6ರಷ್ಟು ಮೀಸಲಾತಿ ನೀಡಲಾಗಿದೆ. ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳನ್ನು ಬಲಗೈ ಗುಂಪಿಗೆ ಸೇರಿಸಿ ಶೇ 1 ರಷ್ಟು‌ ಮೀಸಲಾತಿಯನ್ನೂ ಅಡಕ ಮಾಡಲಾಗಿದೆ. ಹಾಗಾಗಿ ಬಲಗೈ ಗುಂಪಿನ ಮೀಸಲಾತಿ ಶೇ 6 ರಷ್ಟಾಗಿದೆ. ಅದೇ ರೀತಿ ಸ್ಪೃಶ್ಯ ಜಾತಿಗಳಿಗೆ ಶೇ 4 ರಷ್ಟು ಮೀಸಲಾತಿ ನೀಡಲಾಗಿತ್ತು. ಈ ಗುಂಪಿಗೆ ಇತರೆ ಸಮುದಾಯಗಳನ್ನು ಸೇರಿಸಿ ಅವರಿಗೆ ಕೊಟ್ಟಿದ್ದ ಶೇ 1‌ರಷ್ಟು ಮೀಸಲಾತಿಯನ್ನು ಅಡಕ ಮಾಡಲಾಗಿದೆ. ಆ ಮೂಲಕ ಸ್ಪೃಶ್ಯ ಜಾತಿಗಳ ಒಟ್ಟು ಮೀಸಲಾತಿ ಶೇ 5 ರಷ್ಟಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್ ಕೆ ಪಾಟೀಲ್ ಅವರು ತಿಳಿಸಿದ್ದಾರೆ. ಇಂದು (ಆ.20) ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತಾಗಿ ವಿವರಣೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅಂದ ಹಾಗೇ ಸುಪ್ರಿಂಕೋರ್ಟ್ ಕೋರ್ಟ್‌ ಕೂಡ ಒಳಮೀಸಲಾತಿಯನ್ನು ಜಾರಿ ತರುವುದು ಆಯಾ ರಾಜ್ಯಗಳ ಕರ್ತವ್ಯ ಅಂತ ಹೇಳಿತ್ತು, ಆದಾದ ಬಳಿಕ ರಾಜ್ಯದಲ್ಲಿ ಒಳಮೀಸಲಾತಿಯ ಹೋರಾಟ ಇನ್ನೂ ಹೆಚ್ಚಾಗಿತ್ತು, ಇದಲ್ಲದೇ ಒಳಮೀಸಲಾತಿಯನ್ನು ಜಾರಿ ಮಾಡದೇ ಯಾವುದೇ ಸರ್ಕಾರಿ ನೇಮಕಾತಿಯನ್ನು ಮಾಡಿಕೊಂಡಿರಲಿಲ್ಲ. ಈಗ ಒಳಮೀಸಲಾತಿ ಜಾರಿಗೆ ತಂದಿರುವುದರಿಂದ ಇನ್ನೊಂದು ತಿಂಗಳಿನಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದ್ದಗಳ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗಿದೆ.

You may also like