Driving licence : ಮೋಟಾರು ವಾಹನ ಕಾಯ್ದೆ, 1988ರ ಪ್ರಕಾರ, ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ ಅಥವಾ ವಾಣಿಜ್ಯ ವಾಹನವಾಗಿರಲಿ ಮಾನ್ಯ ಪರವಾನಗಿ ಇಲ್ಲದೆ ಯಾವುದೇ ವಾಹನವನ್ನು ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ.
ಆದರೆ ಕೆಲವೊಮ್ಮೆ ಮನೆಯಿಂದ ಹೊರಡುವ ವೇಳೆ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲಿ ಮರೆತು ಬಿಟ್ಟು ಹೋಗುತ್ತೇವೆ. ಹೀಗಾಗಿ ಈ ಒಂದು ತಪ್ಪಿನಿಂದ ತಪ್ಪಿಸಿಕೊಳ್ಳಲು ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ಆನ್ಲೈನ್ ನಲ್ಲೆ ಡೌನ್ಲೋಡ್ ಮಾಡಿ ಮೊಬೈಲ್ ನಲ್ಲಿ ಇಟ್ಟುಕೊಳ್ಳಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಪರಿವಾಹನ್ ಪೋರ್ಟಲ್ ಮೂಲಕ ಆನ್‌ಲೈನ್ ಸೌಲಭ್ಯವನ್ನು ಪರಿಚಯಿಸಿದೆ. ಬಳಕೆದಾರರು ತಮ್ಮ ಚಾಲನಾ ಪರವಾನಗಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಅದಕ್ಕೆ ಸುಲಭ ವಿಧಾನ ಇಲ್ಲಿದೆ ನೋಡಿ.
* ಅಧಿಕೃತ ಪರಿವಾಹನ್ ಪೋರ್ಟಲ್‌ಗೆ ಭೇಟಿ ನೀಡಿ – https://parivahan.gov.in ಗೆ ಹೋಗಿ.
* ಆನ್‌ಲೈನ್ ಸೇವೆಗಳನ್ನು ಆಯ್ಕೆಮಾಡಿ – ಮುಖಪುಟದಲ್ಲಿ, ಆನ್‌ಲೈನ್ ಸೇವೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
* ಚಾಲನಾ ಪರವಾನಗಿ ಸೇವೆಗಳನ್ನು ಆಯ್ಕೆಮಾಡಿ – ಡ್ರಾಪ್‌ಡೌನ್ ಮೆನುವಿನಿಂದ, ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು ಆಯ್ಕೆಮಾಡಿ.
* ರಾಜ್ಯವನ್ನು ಆಯ್ಕೆಮಾಡಿ – ಹೊಸ ಪುಟ ತೆರೆಯುತ್ತದೆ, ಪಟ್ಟಿಯಿಂದ ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.
* ಪ್ರಿಂಟ್ ಡ್ರೈವಿಂಗ್ ಲೈಸೆನ್ಸ್” ಮೇಲೆ ಕ್ಲಿಕ್ ಮಾಡಿ – DL ವಿಭಾಗದ ಅಡಿಯಲ್ಲಿ, ಈ ಆಯ್ಕೆಯನ್ನು ಆರಿಸಿ.
* ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ – ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
* ವಿವರಗಳನ್ನು ಸಲ್ಲಿಸಿ – “ಸಲ್ಲಿಸು” ಬಟನ್ ಮೇಲೆ ಕ್ಲಿಕ್ ಮಾಡಿ.
* ಪರವಾನಗಿಯನ್ನು ಡೌನ್‌ಲೋಡ್ ಮಾಡಿ.
* PDF ಅನ್ನು ಉಳಿಸಲು ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಲು ‘ಪ್ರಿಂಟ್’ ಕ್ಲಿಕ್ ಮಾಡಿ.
