Home » POCSO Case: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೊಕ್ಸೋ ಕೇಸ್ – ಆಗಸ್ಟ್ 23 ಕ್ಕೆ ವಿಚಾರಣೆ ನಿಗದಿ

POCSO Case: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೊಕ್ಸೋ ಕೇಸ್ – ಆಗಸ್ಟ್ 23 ಕ್ಕೆ ವಿಚಾರಣೆ ನಿಗದಿ

0 comments

pocso case: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೊಕ್ಸೋ ಕೇಸ್ ಪ್ರಕರಣವನ್ನು ರದ್ದು ಕೋರಿ ಬಿಎಸ್ ವೈ ವಿಚಾರಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಇದೇ ತರೆನಾದ ಕೇಸ್ ನ ಇತರೆ ಆರೋಪಿಗಳೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಪ್ರಕರಣಗಳ ಜೊತೆಗೇ ಬಿಎಸ್‌ವೈ ಪ್ರಕರಣ ವಿಚಾರಣೆ ಮಾಡುವಂತೆ ಯಡಿಯೂರಪ್ಪ ಪರ ವಕೀಲರು ಮನವಿ ಮಾಡಿದ್ದರು.

ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಚಾರಣೆಗೆ ಮನವಿ ಮಾಡಲಾಗಿತ್ತು. ಆದರೆ ಬಿಎಸ್‌ವೈ ಪರ ವಕೀಲೆ ಸ್ವಾಮಿನಿ ಮನವಿಗೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಮೇಲೆ ಬಾಲಕಿಯೊಂದಿಗೆ ಅಸಭ್ಯ ವರ್ತನೆ ಆರೋಪವಿದೆ. ಪೊಕ್ಸೊ ಕೇಸ್ ಆದ್ದರಿಂದ ಶೀಘ್ರ ವಿಚಾರಣೆ ನಡೆಯಬೇಕಿದೆ ಎಂದು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರೊ.ರವಿವರ್ಮ ಕುಮಾರ್ ಕೋರ್ಟ್‌ಗೆ ಮನವಿ ಮಾಡಿದರು.

ತ್ವರಿತವಾಗಿ ಬಾಲಕಿಯ ಸಾಕ್ಷ್ಯ ವಿಚಾರಣೆ ನಡೆಯಬೇಕಿದೆ. ಹೀಗಾಗಿ ಕೋರ್ಟ್‌ ಈ ಕೇಸನ್ನಯ ವಿಶೇಷವಾಗಿ ಪರಿಗಣಿಸಿ ಆದಷ್ಟು ಬೇಗ ವಿಚಾರಣೆ ಮಾಡಬೇಕೆಂದು ಪೀಠವನ್ನು ಮಾನವಿ ಮಾಡಿದರು. ಮನವಿಯನ್ನು ಪುರಷ್ಕರಿಸಿದ ಮಾನ್ಯ ನ್ಯಾಯಾಲಯ ಯಡಿಯೂರಪ್ಪ ಅವರ ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ನಿಗದಿಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.

Theme Park: ಕಾರ್ಕಳದ ಥೀಮ್‌ ಪಾರ್ಕ್ ಪರಶುರಾಮ ಪ್ರತಿಮೆ ಮರುನಿರ್ಮಾಣ – ಹಿತಾಸಕ್ತಿ ಅರ್ಜಿ ವಿಚಾರಣೆ

You may also like