Home » DJ Ban: ಗಣೇಶ ಚತುರ್ಥಿ ಹಬ್ಬದಲ್ಲಿ ಡಿಜೆ ಬ್ಯಾನ್‌ ವಿಚಾರ – ಸರ್ಕಾರದ ಕ್ರಮ ಖಂಡಿಸಿ ಬಿಜೆಪಿಯಿಂದ ಸದನದ ಬಾವಿಗಿಳಿದು ಧರಣಿ

DJ Ban: ಗಣೇಶ ಚತುರ್ಥಿ ಹಬ್ಬದಲ್ಲಿ ಡಿಜೆ ಬ್ಯಾನ್‌ ವಿಚಾರ – ಸರ್ಕಾರದ ಕ್ರಮ ಖಂಡಿಸಿ ಬಿಜೆಪಿಯಿಂದ ಸದನದ ಬಾವಿಗಿಳಿದು ಧರಣಿ

0 comments

DJ Ban: ಗಣೇಶೋತ್ಸವಕ್ಕೆ ಜಿಲ್ಲಾಡಳಿತಗಳ ನಿರ್ಬಂಧ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ವಿರೋಧ ಪಡಿಸಿದ್ದಲ್ಲದೆ, ಸದನದ ಬಾವಿಗಿಳಿದು ಧರಣಿ ನಡೆಸಿದೆ. ಹಿಂದೂ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು. ವಿರೋಧ ಪಕ್ಷಗಳ ಧರಣಿ ನಡುವೆಯೇ ಪರಿಷತ್ ಕಾರ್ಯಕಲಾಪಗಳನ್ನ ಸಭಾಪತಿ ಬಸವರಾಜ ಹೊರಟ್ಟಿ ಪೂರ್ಣಗೊಳಿಸಿ ಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ರಾಷ್ಟ್ರಗೀತೆ ಹಾಡುವ ಮೂಲಕ ಕಲಾಪ ಅಂತ್ಯ ಹಾಡಲಾಯಿತು.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಡಿಜೆಗೆ ಬ್ಯಾನ್ ಮಾಡಲಾಗುತ್ತಿದೆ. ಬ್ರಿಟಿಷರೇ ತಿಲಕರಿಗೆ ಅವಕಾಶ ಕೊಟ್ಟಿದ್ದರು. ಯಾಕೆ ಗಣೇಶ ಹಬ್ಬದ ಸಂದರ್ಭದಲ್ಲಿ ಡಿಜೆ ಹಾಕಲು ಅವಕಾಶ ಇಲ್ಲ? ಎಂದಯ ಪರಿಷತ್‌ ಸದಸ್ಯ ಶಶಿಲ್ ನಮೋಶಿ ಸರ್ಕಾರವನ್ನು ಪ್ರಶ್ನಿಸಿದರು. ಹಿಂದೂ ಹಬ್ಬಗಳಿಗೆ ಮಾತ್ರ ಯಾಕ್ರಿ ಈ ತರ ಮಾಡ್ತೀರಿ? ರಂಜಾನ್ ಹಬ್ಬದಾಗೆ ಬೆಳಗಿನ ಜಾವ 3 ಗಂಟೆ ತನಕ ಓಡಾಡ್ತಾರೆ. ಬಂದು ನೋಡಿ. ಹಿಂದೂ ಹಬ್ಬಗಳಿಗೆ ಮಾತ್ರ ಯಾಕೆ ಈ ರಿಸ್ಟ್ರಿಕ್ಷನ್?? ಎಂದು ಪ್ರದೀಪ್ ಶೆಟ್ಟರ್ ಕಿಡಿ ಕಾರಿದರು.

ಇದಕ್ಕೆ ಉತ್ತರಿಸಿದ ಸಭಾ ನಾಯಕ ಭೋಸರಾಜು, ಸರ್ಕಾರದಿಂದ ಯಾವುದೇ ಅಡೆತಡೆ ಆದೇಶ ಮಾಡಿಲ್ಲ. ಆಯಾಯ ಜಿಲ್ಲೆಗಳ ಸ್ಥಿತಿ ನೋಡಿಕೊಂಡು ಜಿಲ್ಲಾಧಿಕಾರಿಗಳು ಆದೇಶ ಮಾಡಿರ್ತಾರೆ ಎಂದರು. ಇದಕ್ಕೆ ಬೆಂಗಳೂರಿಗೆ ಒಂದು ಕಾನೂನು ಕಲಬುರ್ಗಿ ಗೆ ಒಂದು ಕಾನೂನಾ?? ಎಂದ ಸುನಿಲ್ ವಲ್ಯಾಪುರೆ ಪ್ರಶ್ನಿಸಿದರು.

Airtel : ಏರ್‌ಟೆಲ್‌ನ 449ರೂ ರಿಚಾರ್ಜ್ ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಲಭ್ಯವಿದೆ ಇಷ್ಟೊಂದು ಸೇವೆಗಳು !!

You may also like