Home » Dharmasthala Case: ಧರ್ಮಸ್ಥಳದ ಪರವಾಗಿ ಶಾಸಕರ ಮುಂದುವರಿದ ಜಾಥಾ : ತೀರ್ಥಹಳ್ಳಿ, ಬೊಮ್ಮನಹಳ್ಳಿಯಿಂದ ನಾಳೆ ಧರ್ಮಸ್ಥಳ ಚಲೋ

Dharmasthala Case: ಧರ್ಮಸ್ಥಳದ ಪರವಾಗಿ ಶಾಸಕರ ಮುಂದುವರಿದ ಜಾಥಾ : ತೀರ್ಥಹಳ್ಳಿ, ಬೊಮ್ಮನಹಳ್ಳಿಯಿಂದ ನಾಳೆ ಧರ್ಮಸ್ಥಳ ಚಲೋ

by ಹೊಸಕನ್ನಡ
0 comments

Dharmasthala Case: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದರ ವಿರುದ್ಧ ಧರ್ಮಸ್ಥಳ ಯಾತ್ರೆ ಮಾಡಲು ಮತ್ತಷ್ಟು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ ನಾಳೆ ಬೆಳಗ್ಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ೨೦೦ಕ್ಕೂ ಹೆಚ್ಚು ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದೇವೆ ಎಂದರು.

ಮಾದಾವರದಲ್ಲಿ ಬೆಳಗ್ಗೆ 7 ಗಂಟೆಗೆ ಎಲ್ಲರೂ ಸೇರಿ ಹೊರಡುತ್ತೇವೆ.ನಾಳೆ ಮಧ್ಯಾಹ್ನ ಧರ್ಮಸ್ಥಳ ದೇವಸ್ಥಾನಕ್ಕೆ ತಲುಪಿ ಪೂಜೆ ಸಲ್ಲಿಸುತ್ತೇವೆ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಸಂಜೆ ವಾಪಸಾಗುತ್ತೇವೆ ಎಂದು ಮಾಹಿತಿ ನೀಡಿದರು.

ಇನ್ನು ಇದೇ ವೇಳೆ ವಿಧಾನಸೌಧದಲ್ಲಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಧರ್ಮಸ್ಥಳವನ್ನು ಎಡಪಂಥೀಯರು, ವಿಚಾರವಾದಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಅಂದುಕೊಂಡ ರೀತಿಯಲ್ಲಿ ತನಿಖೆ ಬಂದಿಲ್ಲ ಎಂದು ಮತ್ತೆ ತನಿಖೆ ಕೇಳುತ್ತಾರೆ ಅಂತ ಹಿಂದೆಯೇ ಊಹಿಸಿದ್ದೆವು. ನಿನ್ನೆ ಕೆಲವರು ಸಭೆ ಸೇರಿ ಯೂಟ್ಯೂಬರ್ ಪರವಾಗಿ ನಿಲ್ಲಬೇಕು ಅಂತಾ ಸಭೆ ಮಾಡಿದ್ದಾರೆ. ಒಬ್ಬರಿಗಂತೂ ಧರ್ಮಸ್ಥಳದ ಹುಂಡಿ ಲೆಕ್ಕ ಕೊಡಬೇಕಂತೆ.ಅಲ್ಲಿಗೆ ಇವರು ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಘುತ್ತಿದೆ ಎಂದರು.

ಪ್ರಗತಿಪರರು ಮಸೀದಿ, ಚರ್ಚ್ ಗಳಲ್ಲಿ ಸಂಗ್ರಹ ಆಗುವ ಹಣದ ಬಗ್ಗೆಯೂ ಕೇಳಬೇಕು. ಸರ್ಕಾರ ಎಡಚರಿಗೆ ಮನ್ನಣೆ ಕೊಡಬಾರದು. ಮತ್ತೆ ಇವರ ಮಾತಿಗೆ ಸರ್ಕಾರ ಕಿವಿಗೊಟ್ಟರೆ ಮುಂದೆ ಆಗುವ ಅನಾಹುತಕ್ಕೆ ಇವರೇ ಕಾರಣ ಆಗುತ್ತಾರೆ ಎಂದು ಎಚ್ಚರಿಸಿದರು.

ಶಾಸಕ ಅರಗ ಜ್ಞಾನೇಂದ್ರ ಕೂಡ ಈ ವೇಳೆ ಮಾತನಾಡಿ ಧರ್ಮಸ್ಥಳವನ್ನ ಬೆಂಬಲಿಸಿ ಅನೇಕ ಪ್ರತಿಭಟನೆಗೆ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಭಕ್ತಾಧಿಗಳು ಬೆಂಬಲ ಘೋಷಣೆ ಮಾಡಿದ್ದಾರೆ. ನಾಳೆ ಬೆಳಗ್ಗೆ ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ ಹೋಗ್ತಿದ್ದೇವೆ. ವಿರೇಂದ್ರ ಹೆಗಡೆಯವರನ್ನ ಭೇಟಿ ಮಾಡ್ತಿವಿ. ಧರ್ಮಸ್ಥಳ ಲಕ್ಷಾಂತರ ಭಕ್ತರನ್ನ ಹೊಂದಿದೆ. ಅಪಪ್ರಚಾರದಿಂದ ಅಲ್ಲಿನ ನಂಬಿಕೆ ಬದ್ದತೆ ಕಡಿಮೆ ಆಗೊಲ್ಲಾ. ಸರ್ಕಾರ ಎಡಪಂಥೀಯರು ಬೇರೆಯವರ ಮುಂದೆ ಮಂಡಿಯೂರಿ ಕೂತಿದೆ ಎಂದರು.

ಮಾಸ್ಕ್ ಮ್ಯಾನ್ ವಿಟ್ನೆಸ್ ಆಗಿದ್ದಾನೆ. ಅವನನ್ನ ಅಪರಾಧಿ ಮಾಡು ಕೆಲಸ ಮಾಡ್ತಿಲ್ಲಾ. ಯಾರು ಅಪಪ್ರಚಾರ ಮಾಡ್ತಿದ್ದಾರೆ ಅವರನ್ನ ಅರೆಸ್ಟ್ ಮಾಡಿಲ್ಲಾ. ಸರ್ಕಾರ ಮೀನಮೇಷ ಏಣಿಸ್ತಿದೆ. ಕೋರ್ಟ್ ನ ಆದೇಶ ಪಡೆದು ಅವರನ್ನ ಬಂಧನ ಮಾಡಬೇಕು ಎಂದು ಶಾಸಕರು ಆಗ್ರಹಿಸಿದರು.

You may also like