Home » Bengaluru: ವೀಲಿಂಗ್ ಮಾಡಿ ತೊಂದರೆ ಮಾಡುವ ಪುಂಡರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್!

Bengaluru: ವೀಲಿಂಗ್ ಮಾಡಿ ತೊಂದರೆ ಮಾಡುವ ಪುಂಡರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್!

0 comments

Bengaluru: ರಸ್ತೆಗಳಲ್ಲಿ ರಾತ್ರಿವೇಳೆ ಹಾಗೂ ಮುಂಜಾನೆಯ ಸಮಯದಲ್ಲಿ ವ್ಹೀಲಿಂಗ್‌ ಮಾಡುವವರನ್ನು ನಿಯಂತ್ರಿಸುವ ಸಲುವಾಗಿ ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದ ಯುವಕರ ಪೋಷಕರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‌ ಸದಸ್ ಗೋವಿಂದರಾಜು ಅವರು ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರೆ ನಗರಗಳಲ್ಲಿ ವ್ಹೀಲಿಂಗ್‌ ಹಾವಳಿಯಿಂದ ಅಪಘಾತಗಳು ಸಂಭವಿಸುವ ಸಂಬಂಧ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ವ್ಹೀಲಿಂಗ್‌ ಮಾಡುವವರ ಮೇಲೆ ರಾತ್ರಿ ಹಾಗೂ ಬೆಳಗಿನ ಜಾವ ಕಣ್ಣಿಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

You may also like