Home » Mangalore: ಎರಡನೇ ದಿನದ ವಿಚಾರಣೆಗೆ ಯೂಟ್ಯೂಬರ್‌ ಸಮೀರ್‌ ಎಂ ಡಿ ಹಾಜರ್

Mangalore: ಎರಡನೇ ದಿನದ ವಿಚಾರಣೆಗೆ ಯೂಟ್ಯೂಬರ್‌ ಸಮೀರ್‌ ಎಂ ಡಿ ಹಾಜರ್

0 comments

Mangalore: ಮಂಗಳೂರು: ಎಐ ವಿಡಿಯೋ ಮೂಲಕ ಗಲಭೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬರ್‌ ಸಮೀರ್‌ ಎಂ.ಡಿ ಬೆಳ್ತಂಗಡಿ ಠಾಣೆಗೆ ಎರಡನೇ ದಿನದ ವಿಚಾರಣೆಗೆ ಹಾಜರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆ ಪೊಲೀಸರು ಸುಮೋಟೋ ಕೇಸ್‌ಗೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದು, ನಿನ್ನೆ ವಿಚಾರಣೆಗೆ ಬಂದಿದ್ದ ಸಮೀರ್‌ ಎಂ ಡಿ, ಇಂದು ಕೂಡಾ ವಿಚಾರಣೆಗೆ ಬಂದಿದ್ದಾರೆ.

ನಿನ್ನೆ ಬರೋಬ್ಬರಿ 7 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾಗಿ ವರದಿಯಾಗಿದೆ. ಇಂದು ಕೂಡಾ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದರು. ಇಂದು ಕೂಡಾ ಇಬ್ಬರು ವಕೀಲರ ಜೊತೆ ಸಮೀರ್‌ ಎಂ ಡಿ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದಾರೆ.

You may also like