Home » Baindoor: ಬೈಕ್‌ನಲ್ಲಿ ತೆರಳುವಾಗ ತೆಂಗಿನ ಮರ ಬಿದ್ದು ಸವಾರ ಸಾವು

Baindoor: ಬೈಕ್‌ನಲ್ಲಿ ತೆರಳುವಾಗ ತೆಂಗಿನ ಮರ ಬಿದ್ದು ಸವಾರ ಸಾವು

0 comments

Baindoor: ಬೈಕ್‌ನಲ್ಲಿ ತೆರಳುವ ಸಂದರ್ಭದಲ್ಲಿ ಮೈಮೇಲೆ ತೆಂಗಿನ ಮರ ಬಿದ್ದು ಸವಾರ ಸಾವಿಗೀಡಾದ ಘಟನೆ ಶಿರೂರು ಗ್ರಾಮದ ಕಳಿಹಿತ್ಲು ಸಮುದ್ರದ ಬಳಿ ನಡೆದಿದೆ.

ಶಿರೂರು ಗ್ರಾಮದ ರಾಮ (52) ಮೃತಪಟ್ಟ ವ್ಯಕ್ತಿ.

ಆ.15 ರಂದು ಮಧ್ಯಾಹ್ನ ಸ್ನೇಹಿತ ಚಂದ್ರು ಎಂಬುವವರ ಜೊತೆ ಮೀನು ಹಿಡಿಯಲು ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಭಾರೀ ಗಾಳಿ ಮಳೆಯಿಂದ ರಸ್ತೆ ಬದಿಯಲ್ಲಿದ್ದ ತೆಂಗಿನ ಮರ ಮುರಿದು ಬಿದ್ದಿದ್ದು, ರಾಮ ಮತ್ತು ಚಂದ್ರು ಇಬ್ಬರೂ ಗಾಯಗೊಂಡಿದ್ದಾರೆ.

ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಿಬ್ಬರು, ಇವರಲ್ಲಿ ರಾಮ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮುಕ್ಕದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್‌ 24 ರಂದು ಮೃತ ಹೊಂದಿದ್ದಾರೆ.

ಈ ಘಟನೆ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like