Home » Crime: ಅಬ್ಬಬ್ಬಾ ಅಂದ್ರೆ 100 ವರ್ಷ ಬದುಕೋ ವ್ಯಕ್ತಿಗೆ 215 ವರ್ಷ ಜೈಲು ಶಿಕ್ಷೆ – ಈತ ಮಾಡಿದ ಘನಘೋರ ಅಪರಾಧ ಏನು?

Crime: ಅಬ್ಬಬ್ಬಾ ಅಂದ್ರೆ 100 ವರ್ಷ ಬದುಕೋ ವ್ಯಕ್ತಿಗೆ 215 ವರ್ಷ ಜೈಲು ಶಿಕ್ಷೆ – ಈತ ಮಾಡಿದ ಘನಘೋರ ಅಪರಾಧ ಏನು?

0 comments

Crime: ಒಬ್ಬ ವ್ಯಕ್ತಿ ಅದೆಂಥದ್ದೇ ಘನಘೋರ ಅಪರಾಧ ಮಾಡಿದ್ರು ಪ್ರಪಂಚದಲ್ಲಿ ಅವನಿಗೆ ಅತ್ಯಂತ ಕಠಿಣ ಶಿಕ್ಷೆ ಅಂದರೆ ಮರಣದಂಡಣೆ. ಅದು ಬಿಟ್ಟರೆ ಜೀವಾವಧಿ ಶಿಕ್ಷೆ. ಅಂದರೆ ಅವನು ಸಾಯುವವರೆಗೆ ಜೈಲಲ್ಲಿ ಕೊಳೆಯಬೇಕು. ಅಬ್ಬಬ್ಬಾ ಆಂದರೆ ಮನುಷ್ಯ 100 ವರ್ಷ ಬದುಕಬಹದು. ಹಾಗಾಗಿ ಜೀವಾವಧಿ ಅಂದ್ರೆ ಆತ ಜೀವಂತ ಇರುವವರೆಗೆ ಜೈಲಲ್ಲಿ ಇರ್ತಾನೆ. ಆದರೆ ಇಲ್ಲೊಬ್ಬನಿಗೆ 215 ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ.

ಹಲವು ವರ್ಷಗಳ ಕಾಲ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ USನ ಕ್ಯಾಲಿಫೋರ್ನಿಯಾದ 64 ವರ್ಷದ ಶಿಕ್ಷಕ ಕಿಮ್ ಕೆನೆತ್‌ ವಿಲ್ಸನ್‌ಗೆ ಇತ್ತೀಚೆಗೆ 215 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ 6-12 ವರ್ಷದೊಳಗಿನ ಬಾಲಕಿಯರನ್ನು ಧ್ವನಿ ನಿರೋಧಕ ಕೋಣೆಗೆ ಕರೆದೊಯ್ದು ಅಪರಾಧ ಎಸಗಿದ್ದ. ಮಾತ್ರವಲ್ಲದೇ, ಆತನ ಮನೆಯಲ್ಲಿ ಪೊಲೀಸರಿಗೆ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ವಿಡಿಯೋಗಳು ಸಹ ಪತ್ತೆಯಾಗಿದ್ದವು.

ಡೆಲ್ ಪಾಸೊ ಹೈಟ್ಸ್ ಎಲಿಮೆಂಟರಿ ಶಾಲೆಯ ಆಡಿಯೋ-ವಿಶುವಲ್ ಕ್ಲಬ್ ಅನ್ನು ನಡೆಸುತ್ತಿದ್ದ ಕಿಮ್ ಕೆನ್ನೆತ್ ವಿಲ್ಸನ್ ಫೆಬ್ರವರಿಯಲ್ಲಿ ಹಲವಾರು ಮಕ್ಕಳ ಲೈಂಗಿಕ ದೌರ್ಜನ್ಯ ಮಾಡಿದ್ದ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ. 2000 ರಿಂದ 2023 ರಲ್ಲಿ ಬಂಧನವಾಗುವವರೆಗೆ ಶಾಲೆಯಲ್ಲಿ ಬೋಧಿಸಿದ್ದ ಅಪರಾಧಿ ವಿಲ್ಸನ್.

2023 ರಲ್ಲಿ ಅವರ ಮೀಡೋವ್ಯೂ ಮನೆಯಲ್ಲಿ ನಡೆಸಿದ ಶೋಧದ ಸಮಯದಲ್ಲಿ , ಸ್ಯಾಕ್ರಮೆಂಟೊ ಪೊಲೀಸರು ಮಕ್ಕಳ ಗಾತ್ರದ ಲೈಂಗಿಕ ಆಟಿಕೆಗಳು, VHS ಟೇಪ್‌ಗಳು ಮತ್ತು ವಿಲ್ಸನ್ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವೀಡಿಯೊಗಳನ್ನು ಒಳಗೊಂಡಿರುವ ಡಿವಿಡಿಗಳ ಸಂಗ್ರಹವನ್ನು ಪತ್ತೆಹಚ್ಚಿದ್ದಾರೆ. ವೀಡಿಯೊಗಳು ಹಲವಾರು ವಿದ್ಯಾರ್ಥಿಗಳೊಂದಿಗೆ ಹಲವು ವರ್ಷಗಳ ಕಾಲ ನಡೆಸಿದ ಹಲ್ಲೆಗಳನ್ನು ತೋರಿಸಿವೆ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಅನ್ಯಾಯಕ್ಕೆ ಒಳಗಾದ ಮಕ್ಕಳ ಪಟ್ಟಿ ಮಾಡಿದ ನ್ಯಾಯಾಲಯದ ದಾಖಲೆಗಳು 6 ರಿಂದ 12 ವರ್ಷ ಮಕ್ಕಳ ವಯಸ್ಸಿನವರು ಎಂದು ಹೇಳಿದೆ.

You may also like